ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ಕಾರ್ ಅಲ್ಲಿ ಇಲ್ಲಿ ನಿಲ್ಲಿಸೋದಿಲ್ಲ, ಪಾರ್ಕಿಂಗ್ ಲಾಟ್‌ನಲ್ಲಿಯೇ ನಿಲ್ಲಿಸ್ತೀವಿ, ಮಳೆ, ಬಿಸಿಲಿನಿಂದ ಕಾರ್‌ಗೆ ರಕ್ಷಣೆ ಸಿಗುತ್ತದೆ ಎಂದು ಯೋಚನೆ ಮಾಡೋರಿಗೆ ಇದು ಶಾಕಿಂಗ್ ನ್ಯೂಸ್!
ಹೌದು, ಮೊಹಾಲಿಯಲ್ಲಿ ಪಾರ್ಕಿಂಗ್ ಲಾಟ್ ಕುಸಿದುಬಿದ್ದು ಸಾಕಷ್ಟು ಐಷಾರಾಮಿ ಕಾರ್‌ಗಳು ಜಖಂ ಆಗಿವೆ. ಮಳೆಯಿಲ್ಲ, ಪ್ರಕೃತಿ ವಿಕೋಪವೂ ಇಲ್ಲ. ಇದ್ದಕ್ಕಿದ್ದಂತೆಯೇ ಪಾರ್ಕಿಂಗ್ ಲಾಟ್‌ನ ಛಾವಣಿ ಕುಸಿದು ಬಿದ್ದಿದ್ದು, ಅಕ್ಕಪಕ್ಕ ನಿಲ್ಲಿಸಿದ್ದ ಕಾರ್‌ಗಳು ಕೂಡ ಜಖಂ ಆಗಿವೆ.
ಪಾರ್ಕಿಂಗ್ ಲಾಟ್‌ನಲ್ಲಿ ಯಾರೂ ಇಲ್ಲದ ಕಾರಣ ಜೀವಹಾನಿ ಸಂಭವಿಸಿಲ್ಲ,ಕಾರ್ ನಿಲ್ಲಿಸಲು ಅಥವಾ ಕಾರ್ ತೆಗೆಯಲು ಜನ ತೆರಳಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಪಾರ್ಕಿಂಗ್‌ನಲ್ಲಿ ಗಾಡಿ ನಿಲ್ಲಿಸೋದಕ್ಕೂ ಜನ ಭಯಬೀಳ್ತಿದ್ದಾರೆ.