ಜಿಯೋ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಮೊಬೈಲ್‌ ರಿಚಾರ್ಜ್‌ ಇನ್ನೂ ಮತ್ತಷ್ಟು ದುಬಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಿಲಯನ್ಸ್‌ ಜಿಯೋ ತನ್ನ ಎಲ್ಲಾ ರಿಚಾರ್ಜ್‌ ಪ್ಲ್ಯಾನ್‌ಗಳ ಹೆಚ್ಚಳವನ್ನು ಘೋಷಣೆ ಮಾಡಿದೆ. ಈಗಾಗಲೇ ಅಸ್ವಿತ್ವದಲ್ಲಿರುವ ಜನಪ್ರಿಯ ರಿಚಾರ್ಜ್‌ ಪ್ಲ್ಯಾನ್‌ಗಳನ್ನು ಶೇ. 25ರಷ್ಟು ದುಬಾರಿ ಮಾಡಲಾಗಿದೆ.

ಹೊಸ ಪ್ಲ್ಯಾನ್‌ಗಳು ಜುಲೈ 3 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ 155 ರೂಪಾಯಿ ರಿಚಾರ್ಜ್‌ ಪ್ಲ್ಯಾನ್‌ ಜುಲೈ 3 ರಿಂದ 189 ರೂಪಾಯಿಗೆ ಏರಲಿದೆ. ಇದರಲ್ಲಿ ಶೇ. 22ರಷ್ಟು ಏರಿಕೆಯಾಗಿದೆ. ದೇಶದಲ್ಲಿ ಗರಿಷ್ಠ ಪ್ರಮಾಣದ ಮೊಬೈಲ್‌ ಗ್ರಾಹಕರನ್ನು ಹೊಂದಿರುವ ಜಿಯೋ ತಮ್ಮ 19 ಪ್ಲ್ಯಾನ್‌ಗಳಿಗೆ ಬೆಲೆ ಏರಿಕೆ ಮಾಡಿದೆ. ಇದರಲ್ಲಿ 17 ಪ್ರೀಪೇಡ್‌ ಪ್ಲ್ಯಾನ್‌ಗಳಾಗಿದ್ದು, ಎರಡು ಪೋಸ್ಟ್‌ಪೇಡ್‌ ಪ್ಲ್ಯಾನ್‌ಗಳಾಗಿವೆ.

155 ರೂಪಾಯಿಯ ರಿಚಾರ್ಜ್‌ ಪ್ಲ್ಯಾನ್‌ 189 ರೂಪಾಯಿಗೆ ಬದಲಾಗಿದ್ದರೂ ವ್ಯಾಲಿಡಿಟಿ ಮಾತ್ರ 28 ದಿನಗಳಿಗೆ ಇರಲಿದೆ. ಇನ್ನು 209 ರೂಪಾಯಿಯ ರಿಚಾರ್ಜ್‌ ಪ್ಲ್ಯಾನ್‌ 249 ರೂಪಾಯಿ ಆಗಲಿದೆ. ಇದರಲ್ಲಿ 40 ರೂಪಾಯಿ ಏರಿಕೆಯಾಗಿದೆ. ಇದರ ವ್ಯಾಲಿಡಿಟಿ ಕೂಡ 28 ದಿನ ಇರಲಿದೆ. ಇನ್ನು ಡೇಟಾ ಬೆನಿಫಿಟ್‌ಗಳಲ್ಲಿ ಈ ಪ್ಲ್ಯಾನ್‌ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅನಿಯಮಿತ 5G ಡೇಟಾವನ್ನು ನೀಡುತ್ತಿದ್ದ ರೂ 239 ಯೋಜನೆಯು ಇನ್ನು ಮುಂದೆ ಹಾಗರ ಇರೋದಿಲ್ಲ. 239 ಪ್ಲಾನ್ ಈಗ ರೂ 299 ವೆಚ್ಚವಾಗಲಿದೆ ಮತ್ತು 28 ದಿನಗಳವರೆಗೆ ಮಾನ್ಯವಾಗಿರುತ್ತದೆ.

ಈಗ ಅನಿಯಮಿತ 5G ಡೇಟಾವು ದಿನಕ್ಕೆ 2GB ಮತ್ತು ಅದಕ್ಕಿಂತ ಹೆಚ್ಚಿನ ಯೋಜನೆಗಳಲ್ಲಿ ಮಾತ್ರ ಲಭ್ಯವಿರುತ್ತದೆ ಎಂಬುದನ್ನ ಗಮನಿಸಬೇಕಿದೆ. ಹೊಸ ಯೋಜನೆಗಳು ಜುಲೈ 3, 2024 ರಿಂದ ಜಾರಿಗೆ ಬರಲಿವೆ. ರಿಲಯನ್ಸ್ ಜಿಯೋ ಕೂಡ ಹೊಸ ಸೇವೆಗಳನ್ನು ಪ್ರಾರಂಭಿಸಿದೆ.

ಪ್ಲ್ಯಾನ್‌ಗೆ ಬೆಲೆ ಏರಿಕೆಯೊಂದಿಗೆ ಜಿಯೋ JioSafe ಮತ್ತು JioTranslate ಅನ್ನು ಘೋಷಿಸಿದೆ. JioSafe ಕರೆ, ಸಂದೇಶ ಕಳುಹಿಸುವಿಕೆ, ಫೈಲ್ ವರ್ಗಾವಣೆ ಮತ್ತು ಹೆಚ್ಚಿನವುಗಳಿಗಾಗಿ ಕ್ವಾಂಟಮ್-ಸುರಕ್ಷಿತ ಸಂವಹನ ಅಪ್ಲಿಕೇಶನ್ ಆಗಿದೆ ಮತ್ತು ತಿಂಗಳಿಗೆ 199 ರೂ.ಗೆ ಲಭ್ಯವಿರುತ್ತದೆ. JioTranslate ಎಂಬುದು ಧ್ವನಿ ಕರೆ, ಧ್ವನಿ ಸಂದೇಶ, ಪಠ್ಯ ಮತ್ತು ಚಿತ್ರವನ್ನು ತಿಂಗಳಿಗೆ 99 ರೂಪಾಯಿಗಳಿಗೆ ಭಾಷಾಂತರಿಸಲು ಬಹು-ಭಾಷಾ ಸಂವಹನ ಅಪ್ಲಿಕೇಶನ್ ಆಗಿದೆ. ಜಿಯೋ ತನ್ನ ಬಳಕೆದಾರರು ತಿಂಗಳಿಗೆ 298 ರೂಪಾಯಿ ಮೌಲ್ಯದ ಈ ಎರಡೂ ಅಪ್ಲಿಕೇಶನ್‌ಗಳನ್ನು ಒಂದು ವರ್ಷದವರೆಗೆ ಸಂಪೂರ್ಣವಾಗಿ ಉಚಿತವಾಗಿ ಪಡೆಯುತ್ತಾರೆ ಎಂದು ಹೇಳಿದೆ.

ರಿಯಲನ್ಸ್‌ ಜಿಯೋ ಹೊಸ ಪ್ಲ್ಯಾನ್‌ಗಳ ವಿವರ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!