ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷಕ್ಕೆ ಜನ ಸಾಮಾನ್ಯರಿಗೆ ಆಟೋ ದರ ಏರಿಕೆ ಶಾಕ್ ಸಿಗುವ ಸಾಧ್ಯತೆ ದಟ್ಟವಾಗುತ್ತಿದೆ. ಪ್ರತಿ ಒಂದು ಕಿಲೋ ಮೀಟರ್ ಗೆ 5 ರೂಪಾಯಿವರೆಗೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ತೈಲಬೆಲೆ ಏರಿಕೆ, ಬಿಡಿಭಾಗಗಳ ಬೆಲೆ ಏರಿಕೆ, ದೈನಂದಿನ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ, ಆಟೋ ಮಿನಿಮಮ್ ದರವನ್ನು ಏರಿಸಬೇಕೆಂದು ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಆಗ್ರಹಿಸುತ್ತಿದ್ದಾರೆ.
ಪ್ರತಿ ಒಂದು ಕಿಲೋ ಮೀಟರ್ ದೂರಕ್ಕೆ 15 ರೂಪಾಯಿಂದ 20 ರೂಪಾಯಿಗೆ ಮತ್ತು 2 ಕಿಲೋ ಮೀಟರ್ ದೂರಕ್ಕೆ 30 ರೂಪಾಯಿಯಿಂದ 40 ರೂಪಾಯಿಗೆ ದರ ಪರಿಷ್ಕರಿಸುವಂತೆ ಒತ್ತಾಯಿಸಿದ್ದಾರೆ.
ದರ ಪರಿಷ್ಕರಣೆ ಕುರಿತು ಸೋಮವಾರ ರಾಜ್ಯ ಸಾರಿಗೆ ಇಲಾಖೆ ಹಾಗೂ ಆಟೋ ಯೂನಯನ್ ಗಳು ಸಭೆ ನಡೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಭೆಯನ್ನು ಮುಂದೂಡಲಾಗಿದ್ದು, ಪ್ರಯಾಣ ದರ ಹೆಚ್ಚಳ ಬೇಡಿಕೆ ಪರಿಗಣನೆಯಾಗುವ ಸಾಧ್ಯತೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಆಟೋರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರ ಮೂರ್ತಿ ಮಾತನಾಡಿ, 2021 ರಲ್ಲಿ ದರಗಳನ್ನು ಪರಿಷ್ಕರಿಸಲಾಗಿತ್ತು. ಆಟೋಗಳ ಕಾರ್ಯಾಚರಣೆಯ ವೆಚ್ಚವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇಂಧನ, ಬಿಡಿಭಾಗಗಳು ಮತ್ತು ಟೈರ್‌ಗಳ ಬೆಲೆ, ಕಾರ್ಯಾಚರಣೆಯ ವೆಚ್ಚವು ಹೆಚ್ಚುತ್ತಿದೆ. ಆದರೆ, ದರ ಮಾತ್ರ ಎಂದಿನಂತೆಯೇ ಇದೆ ಎಂದು ಹೇಳಿದ್ದಾರೆ.