ಹೊಸದಿಗಂತ ಡಿಜಿಟಲ್ ಡೆಸ್ಕ್
ಚೀನಾದ ಕೊರೋನಾ ಏರಿಕೆ ಬೆನ್ನಲ್ಲೇ ಇದೀಗ ದೇಶದಲ್ಲಿ ಆತಂಕ ಶುರುವಾಗಿದ್ದು, ಹೊಸ ರೂಪಾಂತರ ತ್ವರಿತಗತಿಯಲ್ಲಿ ಹರಡುತ್ತಿದೆ.
ಇದೀಗ ಚೀನಾದಲ್ಲಿ ಕೋವಿಡ್ ಸ್ಫೋಟಕ್ಕೆ ಕಾರಣವಾಗಿರುವ ಒಮಿಕ್ರಾನ್ BF.7 ತಳಿ ಭಾರತದಲ್ಲಿ ಪತ್ತೆಯಾಗಿದೆ.
ಗುಜರಾತ್‌ನ ಬಯೋಟೆಕ್ನಾಲಜಿ ರೀಸರ್ಚ್ ಸೆಂಟರ್‌ಗೆ ಕಳುಹಿಸಿರುವ ಮಾದರಿಯಲ್ಲಿ 2 ಮಾದರಿಯಲ್ಲಿ ಒಮಿಕ್ರಾನ್ BF.7 ತಳಿ ವೈರಸ್ ಪತ್ತೆಯಾಗಿದೆ. ಇನ್ನೊಂದು ಒಮಿಕ್ರಾನ್ BF.7 ತಳಿ ಒಡಿಶಾದಲ್ಲಿ ಪತ್ತೆಯಾಗಿದೆ.
ಒಮಿಕ್ರಾನ್ BF.7 ತಳಿ ಭಾರತದಲ್ಲಿ ಮೊದಲು ಪತ್ತೆಯಾಗಿರುವುದು ಅಕ್ಟೋಬರ್ ತಿಂಗಳಲ್ಲಿ. ಇದೀಗ ಒಟ್ಟು 3 ಪ್ರಕರಣಗಳು ವರದಿಯಾಗಿದೆ.
ವಡೋದರದ ಸಭಾನ್‌ಪುರ ಪ್ರದೇಶದಲ್ಲಿ ವಾಸಿಸುತ್ತಿರುವ 61 ವರ್ಷದ ಎನ್‌ಆರ್‌ಐ ಮಹಿಳೆಯೊಬ್ಬರು ಕೋವಿಡ್-19 ರ BF.7 ಪರೀಕ್ಷೆ ನಡೆಸಿದ್ದು, ಮಹಿಳೆಯ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿದೆ, ಅದರ ಫಲಿತಾಂಶಗಳು ಬುಧವಾರ ಬಂದಿದ್ದು, BF.7 ರೂಪಾಂತರ ದೃಢಪಟ್ಟಿದೆ.
ಈ ಮಹಿಳೆಯನ್ನು ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದ್ದು, ಮತ್ತು ಯಾವುದೇ ಪ್ರಮುಖ ರೋಗಲಕ್ಷಣಗಳನ್ನು ವರದಿ ಮಾಡಲಿಲ್ಲ. ಮಹಿಳೆಯ ಸ್ಥಿತಿ ಸಾಮಾನ್ಯವಾಗಿದೆ ಎಂದು ವಡೋದರಾ ಮುನ್ಸಿಪಲ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಎನ್‌ಆರ್‌ಐ ಮಹಿಳೆಯ ಹೊರತಾಗಿ, ಅಹಮದಾಬಾದ್‌ನ ಗೋಟಾ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಗೂ ಬಿಎಫ್.7 ಗೆ ಪರೀಕ್ಷೆ ನಡೆಸಿದ್ದು, ಅವರ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿದೆ ಮತ್ತು ಫಲಿತಾಂಶಗಳು ಅವರು BF.7 ಖಚಿತಗೊಂಡಿದೆ.