ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ನಾಸಿಕ್ನಲ್ಲಿ ಭಾರತೀಯ ವಾಯುಪಡೆಯ ಸುಖೋಯ್ 30 ಎಂಕೆಐ ಫೈಟರ್ ಜೆಟ್ ಪತನಗೊಂಡಿದೆ.
ವಿಮಾನವು ಮೈದಾನದಲ್ಲಿ ಅಪಘಾತಕ್ಕೀಡಾದ ನಂತರ ಹೊಗೆ ಏಳುತ್ತಿರುವು ದೃಶ್ಯಗಳು ಕಂಡುಬಂದಿವೆ. ಅವಳಿ ಎಂಜಿನ್ ಹೊಂದಿರುವ ವಿಮಾನವು ಬೆಂಕಿಗೆ ಆಹುತಿಯಾಗಿದ್ದು, ಅಪಘಾತದ ಸ್ಥಳದ ಬಳಿ ಜನಸಾಗರ ಕಂಡು ಬಂತು.
ವಿಮಾನದ ಇಬ್ಬರು ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ ಎಂಬುದಾಗಿ ರಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.