ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿಯ ಬ್ರಹ್ಮಗಿರಿಯ ಅಪಾರ್ಟ್ ಮೆಂಟ್ ನಲ್ಲಿ 6 ನೇ ತರಗತಿ ವಿದ್ಯಾರ್ಥಿನಿ ಯೂಟ್ಯೂಬ್ ನಲ್ಲಿ ಬರುವ ವಿಡಿಯೋ ನೋಡಿ ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ಶನಿವಾರ ನಡೆದಿದೆ.
ಪ್ರವೀಣ್ ಶೆಟ್ಟಿಯವರ ಮಗಳು ಮಂಗಳಾದೇವಿ (11) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.
ಬಾಲಕಿಗೆ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡಿ, ಪ್ರಯೋಗ ಮಾಡುವ ಅಭ್ಯಾಸ ಹೊಂದಿದ್ದು, ಮನೆಯ ಬೆಡ್ ರೂಮ್ ನ ಬಾತ್ ರೂಮ್ ನಲ್ಲಿ ಬಟ್ಟೆ ಇಡುವ ರಾಡ್ ಗೆ ಚೂಡಿದಾರ ಶಾಲು ಕಟ್ಟಿ ಪ್ರಯೋಗ ಮಾಡಲು ಹೋಗಿ ನೇಣು ಹಾಕಿಕೊಂಡಿರಬೇಕೆಂದು ಶಂಕಿಸಲಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.