SHOCKING REPORT | ಕುಸಿಯುತ್ತಿದೆ ಭಾರತದ ಮಹಿಳೆಯರಲ್ಲಿ ಸಂತಾನೋತ್ಪತ್ತಿಯ ಫಲವತ್ತತೆ ಪ್ರಮಾಣ

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಹಿಳೆಯರಲ್ಲಿ ಸಂತಾನೋತ್ಪತ್ತಿಯ ಸರಾಸರಿ ಫಲವತ್ತತೆಯಲ್ಲಿ ತೀವ್ರ ಕುಸಿತ ಕಾಣುತ್ತಿದೆ ಎಂಬ ಆಘಾತಕಾರಿ ಅಂಶವನ್ನು ವಿಶ್ವಸಂಸ್ಥೆಯ ಜನಸಂಖ್ಯೆಯ ವರದಿ ಬಹಿರಂಗಪಡಿಸಿದೆ. ಜೊತೆಗೆ ಇದು ಭಾರತದಲ್ಲಿ ಜನಸಂಖ್ಯಾ ಬದಲಾವಣೆ ಆರಂಭದ ಮುನ್ಸೂಚನೆ ಎಂದು ಕೂಡಾ ಅದು ಒತ್ತಿ ಹೇಳಿದೆ.
ಈ ಹಿಂದೆ 2.1 ಪ್ರಮಾಣದಲ್ಲಿದ್ದ ಭಾರತದ ಪ್ರತೀ ಮಹಿಳೆಯ ಸಂತಾನೋತ್ಪತಿ ಸರಾಸರಿ ಫಲವತ್ತತೆ ಈಗ 1.9ಕ್ಕೆ ಕುಸಿದಿದೆ. ದೇಶದ ಜನಸಂಖ್ಯಾ ಗಾತ್ರವನ್ನು ಕಾಪಾಡಲು ಅಗತ್ಯವಿರುವಷ್ಟು ಮಕ್ಕಳಿಗೆ ಜನ್ಮನೀಡುವ ಸಾಮರ್ಥ್ಯ ಭಾರತೀಯ ಮಹಿಳೆಯರಲ್ಲಿ ಕುಸಿಯುತ್ತಿದೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.
ಈ ಹಿಂದೆ 1960ರಲ್ಲಿ ಭಾರತದ ಜನಸಂಖ್ಯೆ ಸುಮಾರು 43.6 ಕೋಟಿ ಇತ್ತು. ಈ ಅವಧಿಯಲ್ಲಿ ಮಹಿಳೆ ಸರಾಸರಿಯಾಗಿ ಸುಮಾರು ಆರು ಮಕ್ಕಳನ್ನು ಹೆರುತ್ತಿದ್ದರು. ಈಗ ಸರಾಸರಿ ಇಬ್ಬರು ಮಕ್ಕಳನ್ನು ಹೆರುತ್ತಿದ್ದಾರೆ. 150 ಕೋಟಿ ಆಸುಪಾಸಿನಲ್ಲಿರುವ ಜನಸಂಖ್ಯೆ 170 ಕೋಟಿಗೆ ಏರಿ ನಂತರ 40 ವರ್ಷಗಳ ಬಳಿಕ ಇಳಿಮುಖವಾಗಲಿದೆ ಎಂದು ವರದಿ ಅಂದಾಜಿಸಿದ್ದು, ಭಾರತದಲ್ಲಿ ಜನನ ದರ ಇಳಿಕೆಯಾಗಿದ್ದರೂ ಯುವ ಜನಸಂಖ್ಯೆಯು ಗಮನಾರ್ಹವಾಗಿ ಉಳಿದಿದೆ ಎಂದಿದೆ. ಭಾರತದಲ್ಲಿ 0-14ರ ವಯೋಮಾನದವರ ಸಂಖ್ಯೆ ಶೇ.24ರಷ್ಟಿದ್ದರೆ 10 ರಿಂದ 19ರ ವಯೋಮಾನದವರು ಶೇ.17ರಷ್ಟಿದ್ದಾರೆ. 15ರಿಂದ 64ರ ವಯೋಮಾನದ ದುಡಿಯುವ ವರ್ಗ ಶೇ.68ರಷ್ಟಿದೆ ಎಂದು ವರದಿ ಹೇಳಿದೆ.
ಭಾರತೀಯರ ಜೀವಿತಾವಧಿ 2025ರಲ್ಲಿ ಸರಾಸರಿಯಾಗಿ ಪುರುಷರಲ್ಲಿ 71 ವರ್ಷ, ಮಹಿಳೆಯರಲ್ಲಿ 74 ವರ್ಷಕ್ಕೆ ಏರಿಕೆಯಾಗಿದೆ. 65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಪ್ರಸ್ತುತ ಏಳು ಪ್ರತಿಶತದಷ್ಟಿದೆ. ಇದೇ 2024ರ ಅಂತ್ಯದ ವೇಳೆಗೆ ಭಾರತದ ಜನಸಂಖ್ಯೆ 146 ಕೋಟಿಗೆ ತಲುಪಲಿದೆ ಎಂದು ವರದಿ ಹೇಳಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!