ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಇನ್ನೇನು ಜಗತ್ತಿನಿಂದ ಮರೆಯಾಗಿದೆ ಎಂದುಕೊಳ್ಳುವಷ್ಟರಲ್ಲಿ ಮತ್ತೊಂದು ಶಾಕಿಂಗ್ ಸುದ್ದಿಯನ್ನು ಅಧ್ಯಯನ ವರದಿಯೊಂದು ಬಿಡುಗಡೆ ಮಾಡಿದೆ.
ಕೋವಿಡ್ ಸೋಂಕಿಗೆ ಒಳಗಾದ 171 ಮಂದಿಯ ರಕ್ತದ ಮಾದರಿಗಳನ್ನು ಬಳಸಿ ಈ ಸಂಶೋಧನೆ ನಡೆಸಲಾಗಿದ್ದು, ಕೋವಿಡ್ ಭಾದಿತ ರೋಗಿ ಗುಣಮುಖವಾದರೂ ಆತನ ದೇಹದ ರಕ್ತ ಹಾಗೂ ಜೀವಕೋಶಗಳಲ್ಲಿ ಈ ವೈರಸ್ ಒಂದು ವರ್ಷಕ್ಕೂ ಹೆಚ್ಚು ಕಾಲ ಜೀವಂತವಾಗಿರುತ್ತದೆ.
ಕೋವಿಡ್ ಸೋಂಕು ತಗುಲಿದ ನಂತರ ವ್ಯಕ್ತಿಯ ರಕ್ತದಲ್ಲಿ ಇದು ಮುಂದಿನ 14 ತಿಂಗಳವರೆಗೆ, ಜೀವಕೋಶಗಳಲ್ಲಿ ಎರಡು ವರ್ಷಗಳ ವರೆಗೆ ಜೀವಂತವಾಗಿರುತ್ತವೆ ಎಂಬುದು ಕ್ಯಾಲಿಫೋರ್ನಿಯಾ ಮತ್ತು ಸ್ಯಾನ್‌ಫ್ರಾನ್ಸಿಸ್ಕೊ ವಿಶ್ವವಿದ್ಯಾಲಯಗಳ ಸಂಶೋಧನೆಯಿಂದ ದೃಢಪಟ್ಟಿದೆ ಎಂದು ವರದಿ ಹೇಳಿದೆ.
ಅಮೆರಿಕದ ಕೊಲೊರಾಡೊನಲ್ಲಿ ಏರ್ಪಡಿಸಿದ್ದ ಸಮಾವೇಶವೊಂದರಲ್ಲಿ ಈ ಸಂಶೋಧನಾ ವರದಿಯನ್ನು ಮಂಡಿಸಲಾಗಿದೆ.