ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಡಿಕೇರಿ ತಾಲೂಕಿನ ಹಲವೆಡೆ ಬುಧವಾರ ಭೂಮಿ ಕಂಪಿಸಿರುವ ಅನುಭವವಾಗಿದೆ.
ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಿಂಭಾಗ, ಎರಡನೇ ಮೊಣ್ಣಂಗೇರಿ,ಮದೆ, ಬೆಟ್ಟತ್ತೂರು ಗ್ರಾಮಗಳಲ್ಲಿ ಬುಧವಾರ ಪೂರ್ವಾಹ್ನ 10.50ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಆದರೆ ಈ ಕಂಪನ ರಿಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಬಾರಿ (2018ರಲ್ಲಿ) ಯೂ ಈ ಭಾಗಗಳಲ್ಲಿ ಕಂಪನದ ಅನುಭವ ಆಗಿತ್ತು. ಅದಾದ ಕೆಲವೇ ತಿಂಗಳಲ್ಲಿ ಮಳೆಗಾಲ ಆರಂಭವಾಗಿ ಅಲ್ಲಲ್ಲಿ ಭೂ ಕುಸಿತ ಹಾಗೂ ಜಲಪ್ರಳಯ ಉಂಟಾಗಿತ್ತು. ಇದರಿಂದಾಗಿ ಈ ಭಾಗದ ಜನರಲ್ಲಿ ಇದೀಗ ಆತಂಕ ಸೃಷ್ಟಿಯಾಗಿದೆ.