ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ಎರಡು ಅಂತಸ್ತಿನ ಕಟ್ಟಡವೊಂದು ಕುಸಿತಗೊಂಡಿದೆ. ಮನೆಯ ಅವಶೇಷಗಳಡಿ ಹಲವರು ಸಿಲುಕಿರುವಂತ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನ ಜೀವನ್ ಭೀಮಾನಗರದ ತಿಪ್ಪಸಂದ್ರದಲ್ಲಿ ಪಕ್ಕದ ಮನೆಯ ಕಟ್ಟಡದ ಪಾಯ ತೆಗೆಯುವಾಗ, ಎರಡು ಅಂತಸ್ತಿನ ಕಟ್ಟಡವೊಂದು ಕುಸಿತಗೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಆಗಮಿಸಿದ್ದಾರೆ.
ಇನ್ನೂ ಅವಶೇಷಗಳ ಅಡಿಯಲ್ಲಿ ಯಾರಾದರೂ ಸಿಲುಕಿದ್ದಾರಾ ಅಂತ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.