ಹೊಸದಿಗಂತ ಡಿಜಿಟಲ್ ಡೆಸ್ಕ್
ಶಸ್ತ್ರಸಜ್ಜಿತವಾಗಿ ಶಾಲೆಯೊಳಕ್ಕೆ ನುಗ್ಗಿದ ಬಂದೂಕುದಾರಿಯೊಬ್ಬ ಆಗ್ನೇಯ ಬ್ರೆಜಿಲ್‌ನಲ್ಲಿ ಎರಡು ಶಾಲೆಗಳಿಗೆ ನುಗ್ಗಿ ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಗುಂಡುಹಾರಿಸಿದ್ದು, ಈ ಮಾರಣಾಂತಿಕ ದಾಳಿಯಲ್ಲಿ ಮೂವರು ಮೃತಪಟ್ಟು 13 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ಪಿರಿಟೊ ಸ್ಯಾಂಟೊ ರಾಜ್ಯದ ಸಣ್ಣ ಪಟ್ಟಣವಾದ ಅರಾಕ್ರೂಜ್‌ನಲ್ಲಿ ಒಂದೇ ರಸ್ತೆಯಲ್ಲಿರುವ ಪ್ರಾಥಮಿಕ ಮತ್ತು ಮಧ್ಯಮ ಶಾಲಾ ವಿದ್ಯಾರ್ಥಿಗಳು ಮತ್ತು ಖಾಸಗಿ ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ರಾಜ್ಯದ ಸಾರ್ವಜನಿಕ ಭದ್ರತಾ ಕಾರ್ಯದರ್ಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಿಸ್ತೂಲ್‌ನೊಂದಿಗೆ ಶಾಲೆಗೆ ನುಗ್ಇಗಿದ ಮಾಜಿ ವಿದ್ಯಾರ್ಥಿ ನಡೆಸಿದ ದಾಳಿಗೆ ಇಬ್ಬರು ಶಿಕ್ಷಕರು ಹಾಗೂ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.
ಸರಿಸುಮಾರು ನಾಲ್ಕು ಗಂಟೆಗಳ ನಂತರ, ಅದೇ ಶಾಲೆಯಲ್ಲಿ ಹಿಂದೆ ಓದುತ್ತಿದ್ದ 16 ವರ್ಷದ ಶೂಟರ್ ಅನ್ನು ಪೊಲೀಸರು ಬಂಧಿಸಿದರು ಎಂದು ಎಸ್ಪಿರಿಟೊ ಸ್ಯಾಂಟೋ ಗವರ್ನರ್ ರೆನಾಟೊ ಕ್ಯಾಸಗ್ರಾಂಡೆ ಹೇಳಿದ್ದಾರೆ. ಶಂಕಿತನ ಹೆಸರನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಪಿಸ್ತೂಲು ಮಾಜಿ ವಿದ್ಯಾರ್ಥಿಯ ತಂದೆ, ಮಿಲಿಟರಿ ಪೊಲೀಸ್ ಅಧಿಕಾರಿಗೆ ಸೇರಿದ್ದಾಗಿದೆ ಎಂದು ಕ್ಯಾಸಗ್ರಾಂಡೆ ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ