ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಕ್ಲಹೋಮಾದ ಆಸ್ಪತ್ರೆಯಲ್ಲಿ ಗುಂಡಿನ ದಾಳಿಯ ಒಂದು ದಿನದ ನಂತರ ಅಮೆರಿಕದಲ್ಲಿ ಮತ್ತೆ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸಾವ್ನಪ್ಪಿದ್ದು ಇಬ್ಬರಿಗೆ ಗಾಯವಾಗಿದೆ.
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಮಧ್ಯ ಪಶ್ಚಿಮ ಯುಎಸ್ ರಾಜ್ಯವಾದ ಲೋವಾದ ಕಾರ್ನರ್ ಸ್ಟೊನ್ ಚರ್ಚಿನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ನಂತರದಲ್ಲಿ ಶೂಟರ್ ಸ್ವತಃ ಗುಂಡು ಹೊಡೆದುಕೊಂಡು ಸತ್ತಿದ್ದಾನೆ ಎನ್ನಲಾಗಿದೆ. ಗುರುವಾರ ರಾತ್ರಿ ವಯಸ್ಕ ವ್ಯಕ್ತಿಯೊಬ್ಬ ಏಮ್ಸ್ ಕಾರ್ನರ್‌ಸ್ಟೋನ್ ಚರ್ಚ್‌ನ ಹೊರಗಿನ ಪಾರ್ಕಿಂಗ್ ಸ್ಥಳದಲ್ಲಿ ಇಬ್ಬರು ಸ್ತ್ರೀಯರ ಮೇಲೆ ಗುಂಡು ಹಾರಿಸಿ ಕೊನೆಗೆ ಸ್ವಯಂ ಪ್ರೇರಿತವಾಗಿ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದಾನೆ ಎಂದು ವರದಿಗಳು ಹೇಳಿವೆ.
ಅದೇ ರೀತಿ ಗುರುವಾರ ಮಿಲ್ವಾಕಿಯ ದಕ್ಷಿಣದಲ್ಲಿರುವ ಸ್ಮಶಾನವೊಂದರಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಇಬ್ಬರು ಗುಂಡಿನ ದಾಳಿಯಿಂದ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪೋಲೀಸರು ಈ ದಾಳಿಯನ್ನು ಅತ್ಯಂತ ಗಂಭೀರವೆಂದು ಪರಿಗಣಿಸಿದ್ದು ಜನರಿಗೆ ಎಚ್ಚರದಿಂದಿರುವಂತೆ ಹೇಳಿದ್ದಾರೆ. ಗುರುವಾರ ಸ್ಮಶಾನದಲ್ಲಿ ಹೆಚ್ಚಿನ ಪ್ರಮಾಣದ ಗುಂಡು ಮೊರೆತದ ಸದ್ದು ಕೇಳಿಸಿದೆ ಎಂದು ಸ್ಥಳೀಯರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.