ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಜನನಿಬಿಡ ರಾಜಾ ಬಜಾರ್ ಪ್ರದೇಶದಲ್ಲಿನ ಪಟನಾದ ಖಾಸಗಿ ಆಸ್ಪತ್ರೆಯೊಳಗೆ ಪೆರೋಲ್ ಮೇಲೆ ಹೊರಬಂದ ಕೈದಿಯೊಬ್ಬನ ಮೇಲೆ ನಾಲ್ವರು ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.
ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪೊಲೀಸರ ಪ್ರಕಾರ, ಶಾಸ್ತ್ರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃತನನ್ನು ಬಕ್ಸಾರ್ ಜಿಲ್ಲೆಯ ನಿವಾಸಿ ಚಂದನ್ ಮಿಶ್ರಾ ಎಂದು ಗುರುತಿಸಲಾಗಿದೆ. ಈತ ಒಬ್ಬ ಅಪರಾಧಿಯಾಗಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇವೂರ್ ಜೈಲಿನಲ್ಲಿ ಬಂಧಿಸಲ್ಪಟ್ಟಿದ್ದ. ಮಿಶ್ರಾ ಪರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ದುಷ್ಕರ್ಮಿಗಳು ಮಿಶ್ರಾ ಆಸ್ಪತ್ರೆಗೆ ದಾಖಲಾಗಿದ್ದ ಕೊಠಡಿ ಸಂಖ್ಯೆ 209 ರ ಕಟ್ಟಡಕ್ಕೆ ನುಗ್ಗಿ ಗುಂಡು ಹಾರಿಸಿದ್ದಾರೆ.
ಈ ಘಟನೆಯಿಂದ ಆಸ್ಪತ್ರೆಯಲ್ಲಿದ್ದವರು ಶಾಕ್ ಆಗಿದ್ದಾರೆ. ಗುಂಡಿನ ದಾಳಿಯ ನಂತರ, ಪಾಟ್ನಾ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.
ಚಂದನ್ ಮಿಶ್ರಾ ಒಬ್ಬ ಅಪರಾಧಿ ಮತ್ತು ಅವನ ವಿರುದ್ಧ ಒಂದು ಡಜನ್‌ಗೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಪ್ರಾಥಮಿಕ ತನಿಖೆಯಲ್ಲಿ ವಿರುದ್ಧ ಗುಂಪಿನಿಂದ ಗ್ಯಾಂಗ್‍ನವರು ಅವನನ್ನು ಕೊಲೆ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಗುಂಡು ತಗುಲಿದ ಕಾರಣ ಆತ ಸ್ಥಳದಲ್ಲೇ ನಿಧನನಾಗಿದ್ದಾನೆ.
ಸಿಸಿಟಿವಿ ದೃಶ್ಯಗಳಲ್ಲಿ ಶೂಟರ್‌ನ ಮುಖಗಳು ಸೆರೆಯಾಗಿವೆ ಮತ್ತು ಅವರನ್ನು ಗುರುತಿಸಲು ಪೊಲೀಸರು ಈಗಾಗಲೇ ಬಕ್ಸಾರ್ ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಮತ್ತು ಶೀಘ್ರದಲ್ಲೇ ಪೊಲೀಸರು ಅಪರಾಧಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.