ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಜಾಮಾ ಮಸೀದಿ ಬಳಿ ಶೂಟೌಟ್ ನಡೆದಿದ್ದು, ಯುವಕನನ್ನು ಹತ್ಯೆ ಮಾಡಲಾಗಿದೆ. ನಿನ್ನೆ ತಡರಾತ್ರಿ ಮಸೀದಿ ಬಳಿ ಸಮೀರ್ ಎಂಬ ಯುವಕನನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದಾರೆ. ಹಲವು ಬಾರಿ ಗುಂಡು ಹಾರಿಸಿದ್ದು, ಸಮೀರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಮೀರ್ ಹೊಟೇಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ, ದುಷ್ಕರ್ಮಿಗಳ ಗುಂಪು ಹೊಟೇಲ್ ಮಾಲೀಕನ ಜೊತೆ ಜಗಳ ಮಾಡಿ, ಹಲ್ಲೆ ನಡೆಸಿದ್ದಾರೆ. ಈ ಜಗಳದ ಮಧ್ಯೆ ಸಮೀರ್ ಬಂದಿದ್ದು, ತಕ್ಷಣವೇ ಗುಂಡು ಹಾರಿಸಿದ್ದಾರೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ಸಮೀರ್ ಮೃತಪಟ್ಟಿದ್ದರು. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.