ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯೊಬ್ಬರು ಬೇಕಾಬಿಟ್ಟಿ ಶಾಪಿಂಗ್ ಮಾಡಿದ್ದು, ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಅಚ್ಚರಿ ಎಂದರೆ ಇದು ಮಹಿಳೆಯ ತಪ್ಪಲ್ಲ, ಯಾಕಂದ್ರೆ ಮಹಿಳೆ ಶಾಪಿಂಗ್ ಮಾಡಿರೋದು ನಿದ್ದೆಯಲ್ಲಿ. ಈಕೆಗೆ ನಿದ್ದೆಯಲ್ಲಿ ಕೆಲಸ ಮಾಡುವ ರೋಗವಿದೆ.
42 ವರ್ಷದ ಕೆಲ್ಲಿ ನೈಪ್ಸ್ ಎಂಬ ಮಹಿಳೆ ನಿದ್ದೆಯಲ್ಲಿ ಮೊಬೈಲ್‌ನಲ್ಲಿ ಬೇಕಾಬಿಟ್ಟಿ ಶಾಪಿಂಗ್ ಮಾಡಿದ್ದಾರೆ, ಒಟ್ಟಾರೆ ಆಕೆ ಖರ್ಚು ಮಾಡಿರೋದು ಬರೋಬ್ಬರಿ 3,800 ಡಾಲರ್! ಹೌದು, ಕೆಲ್ಲಿ ಪ್ಯಾರಾಸೋಮ್ನಿಯಾ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಇರುವ ಮನುಷ್ಯ ನಿದ್ದೆಯಲ್ಲಿಯೂ ಜಾಗರೂಕನಾಗಿರುತ್ತಾರೆ, ನಡೆಯುತ್ತಾರೆ, ಮಾತನಾಡುತ್ತಾರೆ, ತಿನ್ನುವುದು ಮತ್ತು ಇತರ ಚಟುವಟಿಕೆಗಳನ್ನು ಮಾಡುತ್ತಿರುತ್ತಾರೆ. ಇವರ ಮೆದುಳು ಭಾಗಶಃ ಎಚ್ಚರವಾಗಿರುತ್ತದೆ.
ಕೆಲ್ಲಿ ನಿದ್ದೆಯಲ್ಲಿ ಸಾಕಷ್ಟು ಪುಸ್ತಕಗಳು, ಅಡಿಗೆ ಪರಿಕರಗಳು, ಮಕ್ಕಳ ಆಟಿಕೆಗಳು, ಫ್ರಿಡ್ಜ್, ಟೇಬಲ್ ಹಾಗೂ ಚಾಕೋಲೆಟ್‌ಗಳನ್ನು ಆರ್ಡರ್ ಮಾಡಿ ಸಾಲಗಾರ್ತಿ ಆಗಿದ್ದಾರೆ. ಈ ಬಗ್ಗೆ ವೈದ್ಯರನ್ನು ಕಂಡ ನಂತರ ತನಗೆ ಸಮಸ್ಯೆ ಇರೋದು ತಿಳಿದುಬಂದಿದೆ. ಕೆಲ್ಲಿ ಕೆಲವು ವಸ್ತುಗಳನ್ನು ರಿಟರ್ನ್ ಮಾಡಿದ್ದಾರೆ. ರಿಟರ್ನ್ ಮಾಡಲಾಗದ ವಸ್ತುಗಳಿಗೆ ಹಣ ನೀಡಿ ಸಾಲದಲ್ಲಿ ಸಿಲುಕಿದ್ದಾರೆ.