ಶಾಪಿಂಗ್ ಅನ್ನೋದು ಬಹುತೇಕರ ಅದರಲ್ಲೂ ಮಹಿಳೆಯರ ನೆಚ್ಚಿನ ಕೆಲಸವೂ ಹೌದು, ಅಗತ್ಯವೂ ಹೌದು. ಆದರೆ ಅನೇಕ ಬಾರಿ ಜನರು ಶಾಪಿಂಗ್ ವೇಳೆ ಅನಗತ್ಯ ವಸ್ತುಗಳನ್ನು ಖರೀದಿ ಮಾಡಿ, ತಮ್ಮ ಬಜೆಟ್ ಮೀರಿ ಹೋಗಿರುತ್ತಾರೆ. ವಿಶೇಷವಾಗಿ ಶಾಪಿಂಗ್ ಪ್ರಿಯರಾದ ಹೆಣ್ಣುಮಕ್ಕಳು ಬಟ್ಟೆ, ಗೃಹೋಪಯೋಗಿ ವಸ್ತು, ಆಭರಣ ಇತ್ಯಾದಿಗಳನ್ನು ಇಷ್ಟವಾದ್ದೆಂದು ಕೊಳ್ಳುವ ಮೂಲಕ ಹಣದ ಲೆಕ್ಕ ತಪ್ಪಿಸುತ್ತಾರೆ. ಇಂತಹ ಸಂದರ್ಭದಲ್ಲಿ ಬುದ್ಧಿವಂತಿಕೆಯಿಂದ ಶಾಪಿಂಗ್ ಮಾಡುವ ಕೆಲವು ಸರಳ ವಿಧಾನಗಳಿವೆ, ಅವುಗಳ ಮೂಲಕ ಹಣ ಉಳಿತಾಯ ಮಾಡುವುದು ಸುಲಭ.
ಪಟ್ಟಿ ಮಾಡುವುದು ಬಹುಮುಖ್ಯ
ಶಾಪಿಂಗ್‌ಗೆ ಹೋಗುವ ಮುನ್ನ ಖರೀದಿಸಬೇಕಾದ ವಸ್ತುಗಳ ಪಟ್ಟಿಯನ್ನು ತಯಾರಿಸಿ. ಈ ವಿಧಾನ ದಿನಸಿ ಶಾಪಿಂಗ್ ಮಾತ್ರವಲ್ಲದೆ ಬಟ್ಟೆ ಅಥವಾ ಗೃಹೋಪಯೋಗಿ ವಸ್ತುಗಳಿಗೂ ಅನ್ವಯಿಸುತ್ತದೆ. ಪಟ್ಟಿಯಲ್ಲಿರುವ ವಸ್ತುಗಳಿಗಷ್ಟೇ ಸೀಮಿತವಾಗಿ ಖರೀದಿ ಮಾಡಿದರೆ, ಅನಗತ್ಯ ಖರ್ಚು ತಪ್ಪಬಹುದು.
ನಗದು ಬಳಕೆ ಜಾಸ್ತಿ ಲಾಭ
ಡಿಜಿಟಲ್ ಪಾವತಿಗಳಿಂದಾಗಿ ಹೆಚ್ಚು ಖರ್ಚಾಗುವ ಸಂಭವವಿರುತ್ತದೆ. ಬಜೆಟ್‌ಗನುಗುಣವಾಗಿ ನಗದು ಹಣವನ್ನೇ ಶಾಪಿಂಗ್‌ಗೆ ತೆಗೆದುಕೊಂಡರೆ, ಅದರೊಳಗೆ ನಿಮ್ಮ ಖರೀದಿಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಇದು ನಿಮ್ಮ ಹಣದ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
ಆಫರ್‌ಗಳ ಆಮೀಷಕ್ಕೆ ಒಳಗಾಗಬೇಡಿ
‘ಆಫರ್’ ಎಂಬ ಪದ ಕಂಡು ಅನೇಕರು ಅಗತ್ಯವಿಲ್ಲದ ವಸ್ತುಗಳನ್ನು ಸಹ ಖರೀದಿಸುತ್ತಾರೆ. ಕೊನೆಗೆ, ಆ ವಸ್ತು ಬಳಕೆಯಾಗದೆ ಉಳಿದುಬಿಡುತ್ತದೆ. ಹೀಗಾಗಿ, ಸಕಾಲದಲ್ಲಿ ಖರೀದಿ ಬೇಕಾದ್ದು ಯಾವುದೆಂಬುದನ್ನು ತೀರ್ಮಾನಿಸಿ, ಆಮೀಷಗಳಿಗೆ ಒಳಗಾಗದಿರಿ.
ಅಗತ್ಯವಿಲ್ಲದ ಖರೀದಿಗೆ ಬ್ರೇಕ್ ಹಾಕಿ
ಇಷ್ಟವಾಯ್ತು ಎಂದು ತಕ್ಷಣ ವಸ್ತು ಕೊಳ್ಳದಿರಿ. ಅದರ ಬದಲು, ನಿಜಕ್ಕೂ ಅವಶ್ಯಕತೆ ಇದೆಯೆಂದು ಯೋಚಿಸಿ ಖರೀದಿ ಮಾಡಿ. ಈ ಚಿಕ್ಕ ತೀರ್ಮಾನದಿಂದ ಬಹುಮಟ್ಟಿಗೆ ಖರ್ಚು ನಿಯಂತ್ರಣವಾಗುತ್ತದೆ.
ಆನ್‌ಲೈನ್-ಆಫ್‌ಲೈನ್ ಬೆಲೆ ಹೋಲಿಕೆ ಮಾಡಿ
ಈ ಕಾಲದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಬೆಲೆಗಳಲ್ಲಿ ಬಹುಪಾಲು ವ್ಯತ್ಯಾಸವಿರಬಹುದು. ಯಾವುದೇ ವಸ್ತು ಖರೀದಿಸುವ ಮೊದಲು ಎರಡರಲ್ಲೂ ಬೆಲೆ ಪರಿಶೀಲಿಸಿ. ಕಡಿಮೆ ಬೆಲೆಯದನ್ನು ಆರಿಸಿ ಖರೀದಿ ಮಾಡಿದರೆ ಖರ್ಚು ಉಳಿತಾಯ ಸಾಧ್ಯ.
ಬಜೆಟ್ ನಿಗದಿ ಪಡಿಸಿ
ಪ್ರತಿ ಶಾಪಿಂಗ್‌ಗೆ ನೀವು ಬಜೆಟ್ ನಿಗದಿಪಡಿಸಿ. ಅಷ್ಟರಲ್ಲಿ ಮಾತ್ರ ಖರೀದಿ ಮಾಡಬೇಕು ಎಂದು ನಿಗದಿತ ಗಡಿಯನ್ನು ಇಟ್ಟುಕೊಂಡರೆ, ಅನಗತ್ಯ ಖರ್ಚು ತಡೆಯಬಹುದು. ಇದರಿಂದ ನಿಮ್ಮ ಹಣದ ಲೆಕ್ಕ ಸುಸ್ಥಿರವಾಗಿರುತ್ತದೆ.
ಹೀಗೆ, ಶಾಪಿಂಗ್ ಮಾಡುವಾಗ ಈ ಸರಳ ಮತ್ತು ಉಪಯುಕ್ತ ಟಿಪ್ಸ್‌ಗಳನ್ನು ಪಾಲಿಸಿದರೆ ನಿಮ್ಮ ಬಜೆಟ್‌ನಲ್ಲಿ ಖರೀದಿ ಸುಲಭವಾಗಿ ಮುಗಿಯುತ್ತದೆ. ಖರ್ಚು ಮಿತಿಯಲ್ಲಿ ಇಟ್ಟುಕೊಳ್ಳುವುದು ಮಾತ್ರವಲ್ಲ, ಅನಗತ್ಯ ಖರೀದಿಗೆ ಬ್ರೇಕ್ ಹಾಕುವುದು ಸಹ ಸಾಧ್ಯವಾಗುತ್ತದೆ.