ಇನ್ಮುಂದೆ ಬೆಂಗಳೂರಿನ ಫುಟ್ ಪಾತ್ ನಲ್ಲಿ ಅಂಗಡಿ ಹಾಕುವಂತಿಲ್ಲ: ಡಿ.ಕೆ.ಶಿವಕುಮಾರ್ ಖಡಕ್ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬೆಂಗಳೂರಿನಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ಮತ್ತು ಬೆಂಗಳೂರು ಅಭಿವೃದ್ಧಿ ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಭೆ ನಡೆಸಿದರು.

ಸಭೆ ಬಳಿಕ ಡಿಕೆ ಶಿವಕುಮಾರ್ ಸುದ್ದಿಗೋಷ್ಟಿ ನಡೆಸಿ, ಇಡೀ ಬೆಂಗಳೂರಲ್ಲಿ ಫುಟ್​ಪಾತ್ ವ್ಯಾಪಾರವನ್ನು ನಿಲ್ಲಿಸುತ್ತೇವೆ. ನಾವು ಹೇಳಿದ ಜಾಗದಲ್ಲಿ ಮಾತ್ರವೇ ವ್ಯಾಪಾರ ಮಾಡಬೇಕು. 3755 ಜನರು ತಳ್ಳುವ ಗಾಡಿ ಕೇಳಿದ್ದಾರೆ. ಕಾನೂನಿನಲ್ಲಿ ಪುಟ್​ಪಾತ್​ನಲ್ಲಿ ಅಂಗಡಿ ಹಾಕುವಂತಿಲ್ಲ. ಹೀಗಾಗಿ ಪ್ಲಾನ್ ಆಫ್ ಆ್ಯಕ್ಸನ್ ಅಂಗಡಿ ಹಾಕಲು ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ.

ಅದೇ ರೀತಿ ಟೌನ್​ಪ್ಲಾನ್​ನಲ್ಲಿ ಬೇಸ್​ಮೆಂಟ್ ಮಾಡುವಂತಿಲ್ಲ. ಈಗಾಗಲೇ ಬಹಳಷ್ಟು ಕಡೆ ಪಾರ್ಕಿಂಗ್​ಗಾಗಿ ಬೇಸ್​ಮೆಂಟ್ ಮಾಡಿದ್ದಾರೆ ಎಂದು ಹೇಳಿದರು.

ಬೆಂಗಳೂರು ನಗರದ ಆಸ್ತಿಗಳಿಗೆ ಇ-ಖಾತಾ ಮಾಡಲು ಹೇಳಿದ್ದೇನೆ. ಡಿಜಿಟಲಿಕರಣ ಮೂಲಕ ದಾಖಲೆ ನೀಡಲು ಮುಂದಾಗಿದ್ದೇವೆ. ಇ-ಖಾತೆಯಲ್ಲಿ ಬೆಂಗಳೂರಿನ ಜನರಿಗೆ ಆಸ್ತಿಗಳ ದಾಖಲೆಯನ್ನು ಒದಗಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಮನೆಯಲ್ಲಿ ನೀರು ನುಗ್ಗಿದರೆ ಪರಿಹಾರ ನೀಡುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವಂತಿಲ್ಲ. ಆ ವಾಹನಗಳನ್ನು ಟ್ರಾಫಿಕ್ ಪೊಲೀಸರು ತೆಗೆದುಕೊಂಡು ಹಾಕ್ತಾರೆ. ಆಕಸ್ಮಾತ್ ವಾಹನಗಳನ್ನು ಮಾಲೀಕರು ತೆಗೆದುಕೊಂಡು ಹೋಗದೇ ಇದ್ದರೆ 21 ದಿನಗಳಲ್ಲಿ ಹರಾಜು ಹಾಕ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ. .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!