ದಂಪತಿ ಸುಖಜೀವನ ನಡೆಸುತ್ತಿದ್ದರು. ಎಲ್ಲರೂ ಹೇಳುವಂತೆ, ಮದುವೆಯಾದ ಮೊದಲ ವರ್ಷದಲ್ಲಿದ್ದ ಪ್ರೀತಿ ಬರುಬರುತ್ತಾ ಕಡಿಮೆಯಾಯ್ತು. ಇಷ್ಟು ದಿನ ಪ್ರೀತಿಯಿಂದ ಮಾಡಿಕೊಂಡಿದ್ದ ಹೊಂದಾಣಿಕೆಯೆಲ್ಲಾ ಈಗ ಕಿರಿಕಿರಿಯಾಗಿ ಬದಲಾಯ್ತು.
ಥೋ ಸೌಂಡ್ ಮಾಡ್ಕೊಂಡು ತಿನ್ಬೇಡ, ಇರಿಟೇಟ್ ಆಗತ್ತೆ ಎಂದು ಗಂಡ ಹೇಳಿದರೆ, ನೀವೇ ಬೇರೆ ಕಡೆ ಹೋಗಿ ತಿನ್ನಿ, ನಾನು ತಿನ್ನೋದು ಹೀಗೆ ಎಂದು ಹೆಂಡತಿ ಹೇಳುತ್ತಿದ್ದಳು. ಪ್ರೀತಿಸಿ ಮದುವೆಯಾದ ಜೋಡಿಯಲ್ಲಿ ಪ್ರೀತಿ ಹೋಗಿಬಿಟ್ರೆ ಉಳಿಯೋದು ಮದುವೆ ಅಷ್ಟೆ.
ಸಾಕಷ್ಟು ಜಗಳಗಳ ನಂತರ ದೂರಾಗುವ ನಿರ್ಧಾರಕ್ಕೆ ಬಂದರು, ಆದರೆ ಅಷ್ಟು ಈಸಿಯಾಗಿ ಡಿವೋರ್ಸ್ ಆಗಬೇಕಲ್ಲಾ, ಆರು ತಿಂಗಳು ಬಿಟ್ಟು ಬನ್ನಿ ಎಂದು ಹೇಳಿ ಕಳಿಸಿದ್ದರು. ಡಿವೋರ್ಸ್‌ಗೆ ಇನ್ನೂ ಆರು ತಿಂಗಳು ಕಾಯಬೇಕಲ್ಲಾ ಎನ್ನೋ ಸಿಟ್ಟಿಗೆ ಜಗಳ ಹೆಚ್ಚಾಯ್ತು.
ಹೀಗೆ ಒಂದು ದಿನ ಅವಳು ಕೂತು, ಮದುವೆ, ಲವ್‌ಗಿಂತ ಮುನ್ನ ನಾವು ಫ್ರೆಂಡ್ಸ್ ಆಗಿದ್ವಿ ಅಲ್ವಾ? ನಮ್ಮ ಮಧ್ಯೆ ಯಾವ ಸಂಬಂಧವೂ ಬೇಡ ಆರು ತಿಂಗಳು ಫ್ರೆಂಡ್ಸ್ ಆಗಿದ್ದು, ನಂತರ ದೂರಾಗೋಣ ಎಂದು ನಿರ್ಧಾರ ಮಾಡಿದ್ರು.
ಯಾವ ಬಂಧ, ಬಂಧನ ಇಲ್ಲ, ಇಬ್ಬರೂ ಪಕ್ಷಿಗಳು. ದಿನವೂ ಮನೆಗೆ ಬಂದು ಒಬ್ಬರ ಇಷ್ಟದ ಅಡುಗೆ ಒಬ್ಬರು ಮಾಡುತ್ತಿದ್ದರು. ಹಾಯಾಗಿ ಕುಳಿತು ಗಾಸಿಪ್ ಮಾಡುತ್ತಿದ್ದರು. ಮನೆಯವರಿಗೆ ವಿಷಯ ತಿಳಿಯದಂತೆ ನಾಟಕ ಆಡುತ್ತಾ ದಿನ ಕಳೆದರು.
ಈಗ ಆತ ಗಮನಿಸಲು ಆರಂಭಿಸಿದ, ಇವಳ ನಗು ಎಷ್ಟು ಸುಂದರ, ಈಥರ ಮನಸ್ಸುಬಿಚ್ಚಿ ನಕ್ಕಿದ್ದು ನೋಡಿ ವರ್ಷಗಳೇ ಆಯ್ತು. ಪಕ್ಕದ ಮನೆಯ ತಾತನ ಗ್ಲಾಸ್ ಹುಡುಕೋಕೆ ಗಂಡ ಸಹಾಯ ಮಾಡುತ್ತಿದ್ದದ್ದು ನೋಡಿದ ಹೆಂಡತಿ ಅಂದುಕೊಂಡಳು ಇವನ ಈ ಗುಣಕ್ಕೆ ಅಲ್ವಾ ನಾನು ಮನಸೋತಿದ್ದು?
ಮಾತುಕತೆ ಹೆಚ್ಚಾಯ್ತು, ಸಂಬಂಧದಲ್ಲಿ ಏನೆಲ್ಲಾ ಸಮಸ್ಯೆಯಿದೆ ಗೊತ್ತಾಯ್ತು. ಇದೆಲ್ಲಾ ಆಗುವುದರೊಳಗೆ ಆರು ತಿಂಗಳೇ ಆಗೋಯ್ತು.. ದೂರಾಗುವ ಭಯಕ್ಕೆ ಇಬ್ಬರೂ ಚಡಪಡಿಸುತ್ತಿದ್ದರು. ದೂರಾಗೋದು ಬೇಡ ಎಂದು ಕಡೆಗೆ ನಿರ್ಧರಿಸಿದರು.
ಈ ರೀತಿ ಕಥೆ ಸುತ್ತಮುತ್ತಲೂ ನಡೆಯಬಹುದು. ಇದರಿಂದ ನೀವು ಕಲಿಯಬಹುದು, ನಿಮ್ಮ ಸಂಬಂಧವನ್ನು ಸುಧಾರಿಸಬಹುದು. ಎಲ್ಲದ್ದಕ್ಕೂ ಮಾತುಕತೆಯೇ ಮೂಲ. ಹೆಚ್ಚು ಮಾತನಾಡಿ, ಅನಿಸಿದ್ದನ್ನು ಹೇಳಿಕೊಳ್ಳಿ ಪ್ರೀತಿ ಮಾಡಿ, ಸದಾ ಒಟ್ಟಿಗೇ ಇಚ್ಛೆಯಿಂದ ಬಾಳಿ