ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದ ವ್ಯಾಂಕೋವರ್‌ನಲ್ಲಿರುವ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಅವರ ಮನೆಯ ಹೊರಗೆ ಸೋಮವಾರ ಗುಂಡಿನ ದಾಳಿ ನಡೆದಿದೆ.
ಇಂಡಿಯಾ ಟುಡೇ ವರದಿಯ ಪ್ರಕಾರ, ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಮತ್ತು ಗ್ಯಾಂಗ್ಸ್ಟರ್ ರೋಹಿತ್ ಗೋಡಾರಾ ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.
ನಗರದ ವಿಕ್ಟೋರಿಯಾ ದ್ವೀಪ ಪ್ರದೇಶದ ಧಿಲ್ಲೋನ್ ಅವರ ಮನೆಯ ಬಳಿ ಗುಂಡಿನ ಸದ್ದು ಕೇಳಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳ ಪ್ರಕಾರ ಬಿಷ್ಣೋಯ್-ಗೋದಾರ ಗ್ಯಾಂಗ್ ಕೆನಡಾದ ವಿಕ್ಟೋರಿಯಾ ದ್ವೀಪ ಮತ್ತು ಟೊರೊಂಟೊದ ವುಡ್‌ಬ್ರಿಡ್ಜ್‌ನಲ್ಲಿ ಗುಂಡಿನ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ.
ನಟ ಸಲ್ಮಾನ್ ಖಾನ್ ಜತೆ ಧಿಲ್ಲೋನ್ ಸಂಪರ್ಕ ಹೊಂದಿದ್ದಾರೆ ಎಂದು ಗ್ಯಾಂಗ್ಸ್ಟರ್ಗಳು ‘ನೀವು ನಿಮ್ಮ ಮಿತಿಯಲ್ಲಿ ಇರಿ, ಇಲ್ಲದಿದ್ದರೆ ನಾಯಿಯಂತೆ ಸಾಯಿಸಲಾಗುತ್ತದೆ ‘ ಎಂದು ಎಚ್ಚರಿಸಿದ್ದಾರೆ ಎಂದು ವರದಿ ಹೇಳಿದೆ.
ಇತ್ತೀಚೆಗೆ, ಸಲ್ಮಾನ್ ಖಾನ್ ನಟ ಸಂಜಯ್ ದತ್ ಜೊತೆಗೆ ಧಿಲ್ಲೋನ್ ಅವರ ಹೊಸ ಟ್ರ್ಯಾಕ್ ‘ಓಲ್ಡ್ ಮನಿ’ ನಲ್ಲಿ ಕಾಣಿಸಿಕೊಂಡರು. .