ನಿಮ್ಮ ಮಕ್ಕಳು ಮುಂದೆ ಉತ್ತಮ ಮಾತುಗಾರರಾಗಬೇಕು, ಡಿಬೇಟ್ ಹಾಗೂ ಇನ್ನಿತರ ಕಾಂಪಿಟೇಷನ್‌ನಲ್ಲಿ ಭಾಗಿಯಾಗಬೇಕು ಅಂದುಕೊಳ್ತೀರಾ? ನಿಮ್ಮ ಮಕ್ಕಳು ಈ ರೀತಿ ಆಗ್ಬೇಕಂದ್ರೆ ಈ ಒಂದು ಅಭ್ಯಾಸ ರೂಢಿ ಮಾಡಿ..
ಮಕ್ಕಳಿಗೆ ಸದಾ ಪ್ರಶ್ನೆಗಳನ್ನು ಕೇಳಿ ಹಾಗೂ ಅವರು ಕೇಳುವ ಪ್ರಶ್ನೆಗಳಿಗೆ ಸುದೀರ್ಘವಾದ ಉತ್ತರ ನೀಡಿ. ಉದಾಹರಣೆಗೆ ಮಗು ನಿಮ್ಮನ್ನು ಅಪ್ಪ ಎಲ್ಲಿ ಎನ್ನುವ ಪ್ರಶ್ನೆ ಕೇಳಿದಾಗ ನೀವು ಆಫೀಸ್ ಎಂದಷ್ಟೆ ಒಂದು ಪದದ ಉತ್ತರವನ್ನು ನೀಡಬೇಡಿ. ಅಪ್ಪ ಆಫೀಸ್‌ಗೆ ಹೋಗಿದ್ದಾರೆ, ಅಪ್ಪನ ಆಫೀಸ್‌ನಲ್ಲಿ ಅವರ ಕೊಲೀಗ್ ಬರ್ಥ್‌ಡೇ ಇದೆ, ಬರ್ಥ್‌ಡೇ ಪಾರ್ಟಿ ಮುಗಿಸಿ ಬರ್ತಾರೆ, ಮಾಮೂಲಿ ಟೈಮ್‌ಗಿಂತ ಅರ್ಧ ಗಂಟೆ ಲೇಟ್ ಆಗತ್ತೆ.. ಹೀಗೆ ಸುದೀರ್ಘವಾದ ಉತ್ತರ ಕೊಡಿ.
ಇದರ ಜೊತೆಗೆ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಿ, ಸ್ಕೂಲ್ ಹೇಗಿತ್ತು? ಎಂದು ನೀವು ಪ್ರಶ್ನೆ ಮಾಡಿದರೆ ಅವರು ಚೆನ್ನಾಗಿತ್ತು ಎಂದಷ್ಟೆ ಹೇಳ್ತಾರೆ. ಆಗ ಮತ್ತೆ ಪ್ರಶ್ನೆ ಕೇಳಿ, ಇವತ್ತು ಯಾವ ಪಾಠ, ಏನು ಆಟ ಆಡಿದ್ರಿ, ಮಧ್ಯಾಹ್ನ ಏನು ತಿಂದೆ, ಫ್ರೆಂಡ್ಸ್ ಬಾಕ್ಸ್‌ನಲ್ಲಿ ಏನಿತ್ತು. ಹೀಗೆ…
ಜೊತೆಗೆ ಮಕ್ಕಳು ಕಥೆ ಅಥವಾ ಸಿನಿಮಾ ನೋಡಿದರೆ ಅದರ ಬಗ್ಗೆಯೂ ಪ್ರಶ್ನೆ ಕೇಳಿ, ಅವರು ಉದ್ದುದ್ದ ಉತ್ತರ ಕೊಡುವಂತೆ ಹೇಳಿ. ಒಂದು ಪದದ ಉತ್ತರ ಬೇಡ, ಹು, ಹೌದು, ನೋ, ಯೆಸ್, ಹ್ಮ್.. ಇಂಥ ಉತ್ತರಗಳನ್ನು ಅಕ್ಸೆಪ್ಟ್ ಮಾಡಬೇಡಿ.