May 11, 2026
Monday, May 11, 2026
spot_img

HAIR CARE | ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡ್ಬೇಕಾ? ಬೇಡ್ವಾ?

ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡ್ಬೇಕಾ? ಬೇಡ್ವಾ?

ಕೂದಲಿನಲ್ಲಿ ನ್ಯಾಚುರಲ್‌ ಎಣ್ಣೆ ಇರುತ್ತದೆ. ಇದಕ್ಕೆ ಪ್ರತ್ಯೇಕ ಎಣ್ಣೆ ಅವಶ್ಯಕತೆ ಇಲ್ಲ ಎಂದು ಕೆಲವರು ಹೇಳಿದ್ರೆ, ವಾರಕ್ಕೆ ಎರಡು ಬಾರಿ ಎಣ್ಣೆ ಹಚ್ಚಿ ಮಾಲಿಷ್‌ ಮಾಡಿಕೊಂಡ್ರೆ ಕೂದಲು ಇನ್ನೂ ಸೊಂಪಾಗಿ ಬೆಳೆಯುತ್ತದೆ ಎಂದು ಹಲವರು ಹೇಳುತ್ತಾರೆ.

ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡಿದ್ರೆ ಏನೆಲ್ಲಾ ಲಾಭ ಇದೆ?

ಬೇರುಗಳನ್ನು ಗಟ್ಟಿ ಮಾಡಿ, ಕೂದಲು ಬೆಳೆಯೋದಕ್ಕೆ ಈ ಮಸಾಜ್‌ ಸಹಾಯ ಮಾಡುತ್ತದೆ. ಬುಡಕ್ಕೆ ಬ್ಲಡ್‌ ಫ್ಲೋ ಹೆಚ್ಚಾಗಲು ಇದೇ ಕಾರಣವಾಗಿದೆ.

ಕೂದಲು ಬಿಸಿಲು, ಧೂಳು, ಚಳಿ ಇನ್ನಿತರ ವೆದರ್‌ ಕಂಡೀಷನ್‌ನ್ನು ಅನುಭವಿಸಿ ಜೀವ ಇಲ್ಲದಂತೆ ಆಗಿರುತ್ತದೆ. ಎಣ್ಣೆ ಹಚ್ಚಿ ಮಾಲಿಷ್‌ ಮಾಡಿದ್ರೆ ಜೀವ ಬಂದಂತೆ ಕಾಣುತ್ತದೆ.

ಸ್ಕಾಲ್ಪ್‌ ಆರೋಗ್ಯ ಹಾಗೂ ಹೊಟ್ಟು ನಿವಾರಣೆಗಾಗಿ ಎಣ್ಣೆ ಹಚ್ಚೋದು ಉತ್ತಮವಾಗಿದೆ.

ತಲೆಗೆ ನೀಡುವ ಮಸಾಜ್‌ನಿಂದಾಗಿ ರಿಲ್ಯಾಕ್ಸ್‌ ಆಗುತ್ತೀರಿ. ಒತ್ತಡ ಕಡಿಮೆಯಾಗುತ್ತದೆ. ಒಳ್ಳೆ ನಿದ್ದೆ ಬರುತ್ತದೆ.

ಬೇಗ ಬಿಳಿಕೂದಲು ಬರುವುದನ್ನು ತಡೆಯಬಹುದು.

ಹೇಗೆ ಹಚ್ಚಬೇಕು?
ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ. ನಂತರ ಬುಡಕ್ಕೆ ಹಚ್ಚಿ ಮಸಾಜ್‌ ಮಾಡಿ. ಓವರ್‌ನೈಟ್‌ ಬಿಡಬಹುದು, ಎರಡು ಗಂಟೆ ಬಿಟ್ಟೂ ಸ್ನಾನ ಮಾಡಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !