VIRAL | ಸ್ಕೂಲಲ್ಲಿ ಬಂದು ನಿದ್ದೆ ಮಾಡೋಕೆ ಸರ್ಕಾರ ಅಷ್ಟೊಂದು ಸಂಬಳ ಕೊಡ್ಬೇಕಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಕ್ಕಳಿಗೆ ಎಕ್ಸಾಂಪಲ್ ಆಗಿ ಬಾಳಬೇಕಿರುವ ಶಿಕ್ಷಕರೇ ಶಾಲೆಗೆ ಬಂದು ಗೊರಕೆ ಹೊಡೆದರೆ ಮಕ್ಕಳು ಅವರಿಂದ ಏನನ್ನು ಕಲೀತಾರೆ?

ಹೌದು, ಉತ್ತರ ಪ್ರದೇಶದ ಮೀರತ್‌ನ ಕೃಷ್ಣಪುರಿ ಜೂನಿಯರ್ ಹೈಸ್ಕೂಲ್‌ನ ಶಿಕ್ಷಕಿಯೊಬ್ಬರು ತರಗತಿಯಲ್ಲೇ ನಿದ್ರೆಗೆ ಜಾರಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ನೆಟ್ಟಿಗರು ಫುಲ್ ಗರಂ ಆಗಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹಿಳಾ ಶಿಕ್ಷಕಿ ಮಕ್ಕಳ ಬಗ್ಗೆ ಯೋಚನೆಯೇ ಇಲ್ಲದೇ ಕುರ್ಚಿಯ ಮೇಲೆ ಆರಾಮವಾಗಿ ಕುಳಿತು ನಿದ್ರಿಸಿದ್ದಾರೆ. ಈ ಶಿಕ್ಷಕಿಯು ಗಾಢವಾದ ನಿದ್ರೆಯಲ್ಲಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ವಿದ್ಯಾರ್ಥಿಯೊಬ್ಬರು ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮೂಲ ಶಿಕ್ಷಣ ಅಧಿಕಾರಿ ಆಶಾ ಚೌಧರಿ ಪ್ರತಿಕ್ರಿಯೆ ನೀಡಿದ್ದು, ಈ ವಿಷಯ ಗಮನಕ್ಕೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಲಾಗಿದೆ. ತನಿಖೆಯ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಕೆಲವರು ಏನೋ ಸಮಸ್ಯೆ ಇರಬಹುದು, ತಮಗೆ ಗೊತ್ತಿಲ್ಲದಂತೆಯೇ ನಿದ್ದೆಗೆ ಜಾರಿರಬಹುದು ಒಂದು ಬಾರಿ ಎಚ್ಚರಿಕೆ ಕೊಟ್ಟು ಬಿಟ್ಟುಬಿಡಿ. ಆದರೆ ಶಾಲೆಗೆ ಮೊಬೈಲ್‌ ತಂದೆ ವಿದ್ಯಾರ್ಥಿಯನ್ನೂ ತರಾಟೆಗೆ ತೆಗೆದುಕೊಳ್ಳಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!