ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕಾವೇರಿ ನೀರು ಬಡುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೃಷ್ಣದಲ್ಲಿ ಭಾನುವಾರ ಸರ್ವಪಕ್ಷಗಳ ಸಭೆ ನಡೆಸಿದ್ದು, ಈ ಸಭೆಯಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಗೈರಾಗಿದ್ದರು. ಕರ್ನಾಟಕದಲ್ಲಿ ಇದ್ದರೂ ಸಹ ಹೆಚ್ಡಿಕೆ ಬಂದಿಲ್ಲ ಎಂದು ಆರೋಪಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಇದೀಗ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಈ ವಿಚಾರವಾಗಿ ದೆಹಲಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ್ದು, ಸರ್ವಪಕ್ಷಗಳ ಸಭೆಯಲ್ಲಿ ಯಾವ ವಿಚಾರ ಚರ್ಚೆ ಮಾಡಿದ್ದಾರೆ. ತಮಿಳುನಾಡಿಗೆ ನೀರು ಬಿಟ್ಟು ನಮ್ಮ ಜತೆ ಏನು ಚರ್ಚೆ ಮಾಡುತ್ತಾರೆ? ನೀರನ್ನು ಬಿಟ್ಟು ನಮ್ಮನ್ನು ಸಭೆಗೆ ಕರೆದು ಚರ್ಚೆ ಮಾಡುತ್ತಾರೆ. ಕಾಟಾಚಾರದ ಸಭೆಗೆ ಗೋಡಂಬಿ, ಬಾದಾಮಿ ತಿನ್ನಲು ಹೋಗಬೇಕಿತ್ತಾ ಎಂದು ವಾಗ್ದಾಳಿ ಮಾಡಿದ್ದಾರೆ.
ಕೇಂದ್ರ ಸಚಿವರ ಸಭೆಗೆ ಅಧಿಕಾರಿಗಳು ಹೋಗಬಾರದೆಂಬ ಆದೇಶಿಸಿದ್ದರು. ನಮಗೆ ಪವರ್ ಕೊಡದೆ ಇದ್ದಾಗ ನಮ್ಮಿಂದ ನೀವೇನು ಬಯಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಪೂರ್ವ ನಿಗದಿ ಕಾರ್ಯಕ್ರಮ ಇದ್ದಿದ್ದಕ್ಕೆ ಮಂಡ್ಯಕ್ಕೆ ನಾನು ಹೋಗಿದ್ದೆ. ಇವರ ಅಪ್ಪಣೆ ತೆಗೆದುಕೊಂಡು ಹೋಗಬೇಕಾ ಎಂದು ಕಿಡಿಕಾರಿದ್ದಾರೆ.
ಇವರ ಮಂತ್ರಿ ಪಟಾಲಂ ಹೇಳುವುದನ್ನು ಚರ್ಚಿಸುವ ಅವಶ್ಯಕತೆ ಇಲ್ಲ. ನಮ್ಮಿಂದ ಹೆಬ್ಬೆಟ್ಟು ಒತ್ತಿಸಿಕೊಳ್ಳೋಕೆ ಕರೆದಿದ್ದಾರಾ? ನಮ್ಮನ್ನು ಯಾವ ರೀತಿ ನಡೆಸಿಕೊಳುತ್ತಿದ್ದೀರಾ ಮೊದಲು ಅದನ್ನು ಸರಿಪಡಿಸಿಕೊಳ್ಳಿ ಎಂದು ಹೇಳಿದ್ದಾರೆ.