ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮೀಕ್ಷೆ ಮಾಡಿದಾಗ ಆರು ಕೋಟಿಯಿದ್ದ ರಾಜ್ಯದ ಜನಸಂಖ್ಯೆ ಈಗ ಏಳು ಕೋಟಿ ಆಗಿದೆ. ಉಳಿದ ಒಂದು ಕೋಟಿ ಜನರನ್ನು ಸಮುದ್ರಕ್ಕೆ ಬಿಡಬೇಕಾ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಇಂದು ಜಾತಿಗಣತಿ ವರದಿ ಸಂಬಂಧ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿವೈ ವಿಜಯೇಂದ್ರ, ಆರ್.ಅಶೋಕ್ ನೇತೃತ್ವದಲ್ಲಿ ವರದಿಯ ಕುರಿತು ಅನೌಪಚಾರಿಕ ಚರ್ಚೆ ನಡೆಸಲಾಯಿತು. ಸಭೆ ಬಳಿಕ ಆರ್.ಅಶೋಕ್ ಮಾತನಾಡಿ, ಸಮೀಕ್ಷೆ ಮಾಡಿದಾಗ ಆರು ಕೋಟಿಯಿದ್ದ ರಾಜ್ಯದ ಜನಸಂಖ್ಯೆ ಈಗ ಏಳು ಕೋಟಿ ಆಗಿದೆ. ಉಳಿದ ಒಂದು ಕೋಟಿ ಜನರನ್ನು ಸಮುದ್ರಕ್ಕೆ ಬಿಡಬೇಕಾ? ಇದು ಔಟ್ ಡೇಟೆಡ್ ವರದಿ, ಮತ್ತೊಮ್ಮೆ ಸಮೀಕ್ಷೆ ಮಾಡಲಿ ಎಂದು ಟೀಕಿಸಿದ್ದಾರೆ.