ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಶ್ರದ್ಧಾ ಕಪೂರ್ ಸಿನಿಮಾಗಳನ್ನು ನಿಧಾನಕ್ಕೆ ಕಾದು ಆರಿಸ್ತಾರೆ, ಸ್ತ್ರೀ ಸಕ್ಸಸ್ ನಂತರ ಶ್ರದ್ಧಾ ಯಾವುದೇ ಸಿನಿಮಾಕ್ಕೆ ಸಹಿ ಹಾಕಿರಲಿಲ್ಲ. ಅವರು ಅತ್ಯುತ್ತಮ ಪಾತ್ರ ಹಾಗೂ ಸ್ಕ್ರಿಪ್ಟ್‌ಗಾಗಿ ಕಾಯ್ತಿದ್ದರು ಎನ್ನಲಾಗಿದೆ.
ಸುಮಾರು ದಿನಗಳ ನಂತರ ಇದೀಗ ಶ್ರದ್ಧಾಗೆ ಬೇಕಿದ್ದ ಪಾತ್ರವೊಂದು ಸಿಕ್ಕಿದೆಯಂತೆ! ತುಂಬಾದ್ ಡೈರೆಕ್ಟರ್ ರಾಹಿ ಅನಿಲ್ ಬರ್ವೆ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರದಲ್ಲಿ ಶ್ರದ್ಧಾ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದ ಪ್ರಿ ಪ್ರೊಡಕ್ಷನ್‌ಗೆ ಸುಮಾರು 3ರಿಂದ 4 ತಿಂಗಳು ಬೇಕಿದೆ. 2025ರ ದ್ವಿತೀಯಾರ್ಧದಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ. ಮುಂದಿನ ವರ್ಷ ಈ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.