ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್ ಕನ್ನಡದ ಹಾಡುಗಳನ್ನು ಹಾಡ್ತಿಲ್ಲ ಎಂಬ ಆರೋಪ ಹಲವು ದಿನಗಳಿಂದ ಕೇಳಿ ಬರುತ್ತಿತ್ತು.
ಇದೀಗ ಕನ್ನಡದ ಹಾಡು ಹಾಡ್ತಿಲ್ಲ ಅಂದೋರಿಗೆ ಶ್ರೇಯಾ ಘೋಷಾಲ್ ಖಡಕ್ ರಿಪ್ಲೈ ಕೊಟ್ಟಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ ಶ್ರೇಯಾ ಘೋಷಾಲ್. ಇನ್ನು ಹೆಸರಿಡದ ಚಿತ್ರದ ಪ್ರೇಮಗೀತೆಯನ್ನು ಶ್ರೇಯಾ ಘೋಷಾಲ್ ಹಾಡಿದ್ದಾರೆ.
ನವ ನಿರ್ದೇಶಕ ಸುಪ್ರೀತ್ ನಿರ್ದೇಶನದ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಳ್ಳುತ್ತಿದ್ದಾರೆ. ತಂದೆ ಮಗಳ ಭಾವನಾತ್ಮಕ ಚಿತ್ರಕ್ಕೆ , ಸೋನ್ ನಿಗಮ್ ಶ್ರೇಯಾ ಘೋಷಾಲ್,ವಿಜಯ್ ಪ್ರಕಾಶ್ ,ಕುನಾಲ್ ಗಾಂಜಾವಾಲ ಸೇರಿದಂತೆ ದಿಗ್ಗಜರು ಈ ಚಿತ್ರಕ್ಕೆ ಧ್ವನಿಯಾಗಿದ್ದಾರೆ.
ಈ ಸುದ್ದಿ ಕೇಳಿ ಗಾಯಕಿಯ ಫ್ಯಾನ್ಸ್ ಸಖತ್ ಖುಷ್ ಆಗಿದ್ದಾರೆ. ಇದಕ್ಕೂ ಮುಂಚೆ ಈ ಬಗ್ಗೆ ಮಾತುಗಳು ಕೇಳಿ ಬಂದಿದ್ದು ಕಾರಣ ಹೀಗಿತ್ತು. ಸಂಜು ವೆಡ್ಸ್ ಗೀತಾ-೨ ಚಿತ್ರದ ಡೈರೆಕ್ಟರ್ ನಾಗಶೇಖರ್ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಅದೆಷ್ಟು ಕಾದಿದ್ದೇವೆ. ನಮ್ಮ ಕಾಯುವಿಕೆಗೆ ಅರ್ಥವೇ ಇಲ್ಲ ಅನ್ನೋ ಅರ್ಥದಲ್ಲಿಯೇ ಹೇಳಿಕೊಂಡಿದ್ದರು.
ಸಂಜು ವೆಡ್ಸ್ ಗೀತಾ ಪಾರ್ಟ್-1 ಚಿತ್ರದ ಗೀತೆ ತುಂಬಾನೆ ಚೆನ್ನಾಗಿದ್ದವು. ರಮ್ಯಾ ಒಳ ಧ್ವನಿಯಂತೇನೆ ಅಷ್ಟೂ ಹಾಡುಗಳು ಶ್ರೇಯಾ ಧ್ವನಿಯಲ್ಲಿ ಕೇಳಿದ್ದವು. ಎಲ್ಲೋ ಒಂದು ಕಡೆಗೆ ರಮ್ಯಾನೆ ಹಾಡಿದಂತೇನೆ ಇತ್ತು. ಇಡೀ ಚಿತ್ರಕ್ಕೆ ಶ್ರೇಯಾ ಧ್ವನಿ ನಿಜಕ್ಕೂ ಅತಿ ದೊಡ್ಡ ಶಕ್ತಿನೇ ಆಗಿತ್ತು.
ಅದನ್ನೆ ಮನದಲ್ಲಿ ಇಟ್ಟುಕೊಂಡು ಸಂಜು ವೆಡ್ಸ್ ಗೀತಾ-೨ ಚಿತ್ರಕ್ಕೂ ಪ್ಲಾನ್ ಮಾಡಿದ್ದರು. ಡೈರೆಕ್ಟರ್ ಶ್ರೀಧರ್ ಸಂಭ್ರಮ ಆ ನಿಟ್ಟಿನಲ್ಲಿಯೇ ಒಂದಷ್ಟು ಟ್ಯೂನ್ ಮಾಡಿದ್ರು.
ಶ್ರೇಯಾ ಘೋಷಾಲ್ ಮ್ಯಾನೇಜರ್ ಕೊನೆವರೆಗೂ ರೆಸ್ಪಾಂಡ್ ಮಾಡಲೇ ಇಲ್ಲ. ಹಾಗಾಗಿಯೇ ಶ್ರೀಧರ್ ಸಂಭ್ರಮ ಹೋಪ್ ಬಿಟ್ಟಿದ್ದರು. ನಾಗಶೇಖರ್ ಆ ಪ್ರಯತ್ನ ಮಾಡಿದ್ದರು. ಆದರೆ, ಏನೂ ಪ್ರಯೋಜನ ಆಗಲೇ ಇಲ್ಲ.
ಶ್ರೇಯಾ ಮಧುರ ಕಂಠಸಿರಿ ಇಲ್ಲದೇ ಸಂಜು ಮತ್ತು ಗೀತಾ-೨ ಕಥೆ ಬೆಳ್ಳಿ ತೆರೆ ಮೇಲೆ ಬಂದಿತ್ತು. ಇದೀಗ ಮತ್ತೆ ಕನ್ನಡಿಗರು ಶ್ರೇಯಾ ಅವರ ಹಾಡುಗಳನ್ನು ಕೇಳುವಂತಾಗಿದೆ.