ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ವಿರುದ್ದದ ಅಂತಿಮ ಟಿ20 ಸರಣಿಯಲ್ಲಿ ಶ್ರೇಯಸ್ ಅಯ್ಯರ್ ದಿಟ್ಟ ಹೋರಾಟದಿಂದ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 160 ರನ್ ಸಿಡಿಸಿದೆ.
ಚಂಡಮಾರುತ ಪರಿಣಾಮ ಬೆಂಗಳೂರಿನ ಸ್ಲೋ ಪಿಚ್‌ನಲ್ಲಿ ಭಾರತ ಅಬ್ಬರಿಸಲು ವಿಫಲವಾಯಿತು. ಆರಂಭಿಕ ಹಂತದಲ್ಲೇ ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು. ಜೈಸ್ವಾಲ್ 21 ರನ್ ಸಿಡಿಸಿ ಔಟಾದರೆ, ರುತುರಾಜ್ 10 ರನ್ ಸಿಡಿಸಿ ಔಟಾದರು.
ಶ್ರೇಯಸ್ ಅಯ್ಯರ್ ಹೋರಾಟ ಆರಂಭಗೊಂಡಿತು. ಆದರೆ ಅಯ್ಯರ್‌ಗೆ ಉತ್ತಮ ಸಾಥ್ ಸಿಗಲಿಲ್ಲ. ನಾಯಕ ಸೂರ್ಯಕುಮಾರ್ ಯಾದವ್ ಕೇವಲ 5 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಫಿನೀಶರ್ ರಿಂಕು ಸಿಂಗ್ 6 ರನ್ ಸಿಡಿಸಿ ನಿರ್ಗಮಿಸಿದರು. ಜಿತೇಶ್ ಶರ್ಮಾ ಹಾಗೂ ಅಯ್ಯರ್ ಹೋರಾಟದಿಂದ ಭಾರತ ಚೇತರಿಸಿಕೊಂಡಿತು. ಜಿತೇಶ್ 24 ರನ್ ಸಿಡಿಸಿ ನಿರ್ಗಮಿಸಿದರು. ಬಳಿಕ ಅಕ್ಷರ್ ಪಟೇಲ್ ಸಾಥ್ ನೀಡಿದರು, ಅಂತಿಮವಾಗಿ ಇಂಡಿಯಾ 8 ವಿಕೆಟ್ ನಷ್ಟಕ್ಕೆ 160 ರನ್ ಸಿಡಿಸಿ ಸಾದಾರಣ ಟಾರ್ಗೆಟ್ ನೀಡಿದರು.