ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮ್ಯಾನ್ ಶ್ರೇಯಸ್ ಅಯ್ಯರ್ ಅವರು ‘ಐಸಿಸಿ ಮಾರ್ಚ್ ತಿಂಗಳ ಆಟಗಾರ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಯ್ಯರ್, ಐಸಿಸಿ ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿಗೆ ನನ್ನನ್ನು ಹೆಸರಿಸಿರುವುದು ಸಂತಸ ಮೂಡಿಸಿದೆ. ಅದೂ ನಾವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಿಂಗಳು ಈ ಗೌರವ ಒಲಿದಿರುವುದು ಎಂದಿಗೂ ಮರೆಯಲಾರೆ ಎಂದು ಹೇಳಿದ್ದಾರೆ.
ಭಾರತ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಅಯ್ಯರ್ ಆ ಟೂರ್ನಿಯಲ್ಲಿ 243 ರನ್ ಹೊಡೆದಿದ್ದರು. ಭಾರತ ಸತತ ಎರಡನೇ ತಿಂಗಳು ಈ ಗೌರವಕ್ಕೆ ಪಾತ್ರವಾಗಿದೆ. ಫೆಬ್ರವರಿ ತಿಂಗಳಲ್ಲಿ ಶುಭಮನ್ ಗಿಲ್ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು.