ಶ್ರೀ ಕೃಷ್ಣನ ಜನ್ಮಾಷ್ಟಮಿಯಲ್ಲಿ ವಿಶೇಷವಾಗಿ ತಯಾರಿಸುವ ಪ್ರಸಾದಗಳಲ್ಲಿ ಸಿಹಿ ಅವಲಕ್ಕಿಗೆ ಒಂದು ವಿಶೇಷ ಸ್ಥಾನವಿದೆ. ಕೃಷ್ಣನಿಗೆ ಅವಲಕ್ಕಿ ತುಂಬಾ ಇಷ್ಟ ಎಂಬ ನಂಬಿಕೆ ಇದೆ. ಆದ್ದರಿಂದ ಈ ಹಬ್ಬದಂದು ದೇವರಿಗೆ ನೈವೇದ್ಯವಾಗಿ ಸಿಹಿ ಅವಲಕ್ಕಿಯನ್ನು ತಯಾರಿಸಲಾಗುತ್ತದೆ. ಇದು ತಿನ್ನಲು ರುಚಿಯಾದರೆ ಜೊತೆಗೆ ಆರೋಗ್ಯಕ್ಕೂ ಹಿತಕರ. ಸುಲಭವಾಗಿ ತಯಾರಿಸಬಹುದಾದ ಈ ತಿನಿಸು ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಅಗತ್ಯವಿರುವ ಪದಾರ್ಥಗಳು:
ಅವಲಕ್ಕಿ – 1 ಕಪ್
ಬೆಲ್ಲ – ½ ಕಪ್
ತುರಿದ ಕೊಬ್ಬರಿ – ½ ಕಪ್
ಏಲಕ್ಕಿ ಪುಡಿ – ½ ಟೀ ಸ್ಪೂನ್
ತುಪ್ಪ – 2 ಟೇಬಲ್ ಸ್ಪೂನ್
ಗೋಡಂಬಿ, ದ್ರಾಕ್ಷಿ – ಸ್ವಲ್ಪ (ಐಚ್ಛಿಕ)
ಸ್ವಲ್ಪ ಉಪ್ಪು
ತಯಾರಿಸುವ ವಿಧಾನ:
ಮೊದಲು ಅವಲಕ್ಕಿಯನ್ನು ಸ್ವಲ್ಪ ನೀರಿನಲ್ಲಿ ತೊಳೆದು, ತಕ್ಷಣವೇ ತೆಗೆದು ಹಿಂಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಕರಗಿಸಿ. ಬೆಲ್ಲದ ಪಾಕ ಸಿದ್ಧವಾದ ಮೇಲೆ ಅದಕ್ಕೆ ತುರಿದ ಕೊಬ್ಬರಿ ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಬೇಕು. ಈಗ ತೊಳೆದ ಅವಲಕ್ಕಿಯನ್ನು ಈ ಪಾಕದಲ್ಲಿ ಹಾಕಿ ನಿಧಾನವಾಗಿ ಮಿಶ್ರಣ ಮಾಡಬೇಕು.
ಈ ಮಿಶ್ರಣದ ಮೇಲೆ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಹಾಕಿ ಮತ್ತೊಮ್ಮೆ ಕಲಸಿದರೆ ಸಿಹಿ ಅವಲಕ್ಕಿ ಸಿದ್ಧ.
ಶ್ರೀ ಕೃಷ್ಣನಿಗೆ ಅತ್ಯಂತ ಪ್ರಿಯವಾದ ಸಿಹಿ ಅವಲಕ್ಕಿ ತಯಾರಿಸಲು ಬಹಳ ಸುಲಭವಾದ ರೆಸಿಪಿ. ಹಬ್ಬದ ಸಂಭ್ರಮದಲ್ಲಿ ದೇವರಿಗೆ ನೈವೇದ್ಯವಾಗಿ ಅರ್ಪಿಸಿ, ನಂತರ ಕುಟುಂಬದೊಂದಿಗೆ ಹಂಚಿಕೊಂಡು ಸವಿಯಿರಿ. ಈ ಸಿಹಿಯಾದ ತಿನಿಸು, ಹಬ್ಬದ ಸಿಹಿಯನ್ನು ದ್ವಿಗುಣಗೊಳಿಸುತ್ತದೆ.