ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜೂನ್ 25 ರಂದು ಪ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿರುವ ಭಾರತೀಯ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾನಿಗಳು ನಾಳೆಯ ಬಳಿಕ ಭೂಮಿಗೆ ಹಿಂತಿರುಗಲಿದ್ದಾರೆ.
14 ದಿನದ ಬಾಹ್ಯಾಕಾಶ ಯಾತ್ರೆ ಅಂತ್ಯ ಸಮೀಪಿಸುತ್ತಿದೆ. ನಾಸಾ, ಇಸ್ರೋ, ಆಕ್ಸಿಮ್-4 ಮಿಷನ್ ನಾಲ್ವರು ಗಗನಯಾನಿಗಳು ಭೂಮಿಗೆ ಬರುವ ನಿಖರ ದಿನಾಂಕ, ಸಮಯವನ್ನು ನಿಗದಿಪಡಿಸಿಲ್ಲ. ಜುಲೈ 10ರ ಬಳಿಕ ನಾಲ್ವರು ಗಗನಯಾನಿಗಳು ಭೂಮಿಗೆ ಹಿಂತಿರುಗುತ್ತಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ, ಸ್ಟೆಮ್ ಸೆಲ್, ಬಾಹ್ಯಾಕಾಶದಲ್ಲಿ ಮನುಷ್ಯರ ಮೂಳೆ ಸವೆತ, ಗಿಡಗಳನ್ನು ಬೆಳೆಯುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಂಶೋಧನೆ, ಅಧ್ಯಯನ ನಡೆಸಿದ್ದಾರೆ. ನಾಲ್ವರು ಗಗನಯಾನಿಗಳು ಒಟ್ಟಾರೆ 64 ಪ್ರಯೋಗ, ಅಧ್ಯಯನ ನಡೆಸಿದ್ದಾರೆ. ಭಾರತದ ಗಗನಯಾನಿ ಶುಭಾಂಶು ಶುಕ್ಲಾ 7 ಪ್ರಯೋಗ ಮಾಡಿದ್ದಾರೆ.
ಬಾಹ್ಯಾಕಾಶ ನಿಲ್ದಾಣ ಹಾಗೂ ಸಂಶೋಧಕರ ಮಧ್ಯೆ ಬ್ರಿಡ್ಜ್ ಆಗಿ ನಾನು ಕೆಲಸ ಮಾಡುವುದಕ್ಕೆ ಹೆಮ್ಮೆಯಾಗುತ್ತಿದೆ. ಸಂಶೋಧಕರ ಪರವಾಗಿ ನಾನು ಸಂಶೋಧನೆ ನಡೆಸುತ್ತಿದ್ದೇನೆ. ನಾನು ಇಲ್ಲಿ ಭಾರಿ ಬ್ಯುಸಿಯಾಗಿದ್ದೇನೆ ಎಂದು ಶುಭಾಂಶು ಶುಕ್ಲಾ ಹೇಳಿದ್ದಾರೆ.
ದಿ ಆಕ್ಸಿಮ್-4 ಕ್ರ್ಯೂಗಳು ಈ ವಾರ ಭೂಮಿಗೆ ವಾಪಸ್ ಬರಲಿದ್ದಾರೆ. ಇದಕ್ಕೆ ಎಲ್ಲ ಪರಿಸ್ಥಿತಿಗಳು ಅನುಕೂಲಕಾರಿಯಾಗಿರಬೇಕು. ಅಧಿಕೃತವಾಗಿ ನಾಸಾ, ಇಸ್ರೋ ಗಗನಯಾನಿಗಳು ಭೂಮಿಗೆ ವಾಪಸ್ ಬರುವ ನಿಖರ ಸಮಯ, ದಿನಾಂಕವನ್ನು ಘೋಷಿಸಿಲ್ಲ. ಅಮೆರಿಕಾದ ಫ್ಲೋರಿಡಾದ ಕರಾವಳಿ ತೀರಕ್ಕೆ ನಾಲ್ವರು ಗಗನಯಾನಿಗಳು ಕ್ಯಾಪ್ಸುಲಾನಲ್ಲಿ ಬರಲಿದ್ದಾರೆ. ಸಮುದ್ರದಲ್ಲಿ ಪ್ಲ್ಯಾಶ್ ಡೌನ್ ಮಾಡಲಿದ್ದಾರೆ.
ಇತ್ತೀಚೆಗೆ ಅಮೆರಿಕಾದ ಸುನಿತಾ ವಿಲಿಯಮ್ಸ್ ಸೇರಿದಂತೆ ನಾಲ್ವರು ಗಗನಯಾನಿಗಳು ಅಮೆರಿಕಾದ ಸಮುದ್ರದಲ್ಲಿ ಪ್ಲ್ಯಾಶ್ ಡೌನ್ ಮಾಡಿದ್ದರು.