ಕ್ಯಾಪ್ಸುಲ್‌ನಿಂದ ನಗುಮುಖದಲ್ಲಿ ಹೊರಬಂದ ಶುಭಾಂಶು ಶುಕ್ಲಾ: ಖುಷಿಯಲ್ಲಿ ಕಣ್ತುಂಬಿಕೊಂಡ ತಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಯಶಸ್ವಿಯಾಗಿ ಕ್ಯಾಲಿಫೋರ್ನಿಯಾದ ಸ್ಯಾನ್​ ಡಿಯಾಗೋದಲ್ಲಿ ಬಂದಿಳಿದಿದ್ದಾರೆ.

ಇತ್ತ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕ್ಯಾಲಿಫೋರ್ನಿಯಾದ ಕರಾವಳಿಗೆ ಸ್ಪ್ಲ್ಯಾಶ್​ಡೌನ್ (Splashdown) ಆಗುತ್ತಿದ್ದಂತೆ ಶುಭಾಂಶು ಶುಕ್ಲಾ ಅವರ ತಾಯಿ ಕಣ್ಣೀರು ಹಾಕಿರುವುದು ಕಂಡುಬಂದಿದೆ. ಜೊತೆಗೆ ಅವರ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಯಶಸ್ವಿಯಾಗಿ ಸ್ಪ್ಯಾಷ್‌ ಡೌನ್ ಮಾಡಲಾಯಿತು. ಬಳಿಕ ಕ್ಯಾಪ್ಸುಲ್‌ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಿದ ಬಳಿಕ ಕೆಳಗಡೆ ಇರುವ ಬಾಗಿಲು(ಹ್ಯಾಚ್) ತೆರೆಯಲಾಯಿತು. ಈ ಬಾಗಿಲಿನ ಮೂಲಕ ಯಾನಿಗಳನ್ನು ಸ್ಪೇಸ್ ಎಕ್ಸ್ ಸಿಬ್ಬಂದಿ ಹೊರಗೆ ನಿಧಾನವಾಗಿ ಎಳೆದು ಕೈಹಿಡಿದು ಕರೆದುಕೊಂಡು ಹೋದರು. ಈ ವೇಳೆ ಎರಡನೇಯದಾಗಿ ಹೊರಬಂದ ಶುಭಾಂಶು ಶುಕ್ಲಾ ನಗುಮುಖದಿಂದ ಕೈಬೀಸಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಕ್ಷಣವನ್ನು ಭಾರತದಿಂದಲೇ ಶುಭಾಂಶು ಶುಕ್ಲಾ ಅವರ ಕುಟುಂಬಸ್ಥರು ಕಣ್ತುಂಬಿಕೊಂಡು ಸಂತೋಷ ಪಟ್ಟಿದ್ದಾರೆ. ಸತತ 18 ದಿನಗಳ ಬಳಿಕ ಶುಭಾಂಶು ಶುಕ್ಲಾ ನೇತೃತ್ವದ ಗಗನಯಾನಿಗಳು ಮರಳಿದ್ದಾರೆ.

ಈ ಅದ್ಭುತ ಕ್ಷಣವನ್ನು ಭಾರತದ ಉತ್ತರ ಪ್ರದೇಶದ ಲಕ್ನೋ ನಗರದಿಂದ ಶುಭಾಂಶು ಶುಕ್ಲಾ ಅವರ ಕುಟುಂಬಸ್ಥರು ನೋಡಿ ಭಾವುಕರಾದರು. ಶುಭಾಂಶು ಶುಕ್ಲಾ ಅವರ ತಾಯಿ ಕಣ್ಣೀರು ಹಾಕಿರುವುದು ಎಲ್ಲರನ್ನೂ ಭಾವುಕರನ್ನಾಗಿಸಿತು. ಇದೇ ವೇಳೆ ಮಗ ಭೂಮಿಗೆ ಮರಳಿರುವುದನ್ನು ಸೆಲೆಬ್ರೇಟ್ ಮಾಡಿದರು. ಭಾರತದ ಭಾವುಟ ಹಿಡಿದು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

ಶುಭಾಂಶು ಶುಕ್ಲಾ ಅವರು ಯಶಸ್ವಿಯಾಗಿ ಭೂಮಿಗೆ ತಲುಪುತ್ತಿದ್ದಂತೆ ಪ್ರಧಾನಿ ಮೋದಿ ಅವರು ಸಂತಸ ಪಟ್ಟಿದ್ದು ಇದು ಭಾರತದ ಹೆಮ್ಮೆಯ ಕ್ಷಣ. ಶುಕ್ಲಾ ಅವರು ಭೂಮಿಗೆ ರಿಟರ್ನ್​ ಆಗಿರುವುದು ಐತಿಹಾಸಿಕ ಮೈಲಿಗಲ್ಲು ಆಗಿದೆ. ಭಾರತದ ಮೊಟ್ಟ ಮೊದಲ ಗಗನಯಾನಿ ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಸನ್​ಗೆ ಭೇಟಿ ನೀಡಿದ್ದಾರೆ. ದೇಶದ ನೂರಾರು ಕೋಟಿ ಕನಸುಗಳಿಗೆ ಶುಕ್ಲಾ ಅವರು ಸ್ಪೂರ್ತಿ ಎಂದು ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!