ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಇನ್ನು 15 ತಿಂಗಳಲ್ಲಿ ಗ್ಯಾರಂಟಿಗಳು ಸ್ಥಗಿತಗೊಳ್ಳುತ್ತವೆ. ವಾಲ್ಮೀಕಿ ನಿಗಮದ ಹಣ ತೆಲಂಗಾಣ ಚುನಾವಣೆಗೆ ಬಳಕೆ ಮಾಡಿದ್ರು. ಈ ಸರ್ಕಾರ ತೆಗೆಯೋವರೆಗೂ ನಾನು ಮನೆಯಲ್ಲಿ ಮಲಗಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಪ್ರತಿಜ್ಞೆ ಮಾಡಿದ್ದಾರೆ.
ಇನ್ನು ದೇವೇಗೌಡರು ಚನ್ನಪಟ್ಟಣದಲ್ಲಿ ಮೊಮ್ಮಗನ ಪರ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಚಕ್ಕೆರೆ ಗ್ರಾಮದಲ್ಲಿ ಗೌಡ್ರು ಪ್ರಚಾರ ನಡೆಸಿದರು. ಗ್ರಾಮಕ್ಕೆ ಆಗಮಿಸಿದ ದೇವೇಗೌಡರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು.
ವಾದ್ಯ ಮತ್ತು ಪೂರ್ಣಕುಂಭದೊಂದಿಗೆ ಪುಷ್ಪವೃಷ್ಟಿ ಮಾಡುವ ಮೂಲಕ ಅವರನ್ನು ಸ್ವಾಗತಿಸಲಾಯಿತು. ಕಾರ್ಯಕ್ರಮವೊಂದರಲ್ಲಿ ನಿಖಿಲ್ ಪರ ಮತಯಾಚನೆ ನಡೆಸಿದ ದೇವೇಗೌಡರು ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.
ಈ ರಾಜ್ಯದಲ್ಲಿ 15 ತಿಂಗಳಲ್ಲಿ 5 ಗ್ಯಾರಂಟಿಗಳೂ ಸ್ಥಗಿತವಾಗಲಿದೆ. ಗ್ಯಾರಂಟಿಗೂ ʻಪಂಚರತ್ನʼಕ್ಕೂ ಎಲ್ಲಿಯ ಸಂಬಂಧ? 5 ಗ್ಯಾರಂಟಿಯಲ್ಲಿ 1 ಗ್ಯಾರಂಟಿ ಮುಗಿದು ಹೋಗಿದೆ. ಗೃಹಲಕ್ಷ್ಮಿ ಹಣ ಈಗ ಚನ್ನಪಟ್ಟಣದ ಜನರಿಗೆ ಹಂಚಿಕೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.