ಸಿದ್ದರಾಮಯ್ಯ ಆಡಳಿತದಲ್ಲಿ ನಿಯಂತ್ರಣ ಕಳೆದುಕೊಂಡಿಲ್ಲ: ಡಿಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಿಎಂ‌ ಸಿದ್ದರಾಮಯ್ಯನವರು ಆಡಳಿತದಲ್ಲಿ ಕಂಟ್ರೋಲ್ ಕಳೆದುಕೊಂಡಿಲ್ಲ. ನಾನು ಅದರ ಬಗ್ಗೆ ಏನೂ ಕೇಳಿಲ್ಲ. ನಮಗೆ ಹೈಕಮಾಂಡ್​ ಇದ್ದು, ಎಲ್ಲವನ್ನೂ ನೋಡಿಕೊಳ್ಳುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಆಡಳಿತದಲ್ಲಿ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾನು ಎಲ್ಲರ ಜೊತೆ ಮಾತನಾಡುತ್ತೇನೆ. ಏನೂ ಸಮಸ್ಯೆ ಇಲ್ಲ. ಆಡಳಿತದಲ್ಲಿ ಕಂಟ್ರೋಲ್ ಕಳೆದುಕೊಂಡಿಲ್ಲ. ಮಾಧ್ಯಮದವರೇ ಬ್ಲೋ ಅಪ್ ಮಾಡುತ್ತಿದ್ದಾರೆ ಎಂದರು.

ತುಮಕೂರು ಭೇಟಿ ವಿಚಾರಕ್ಕೆ, ಎತ್ತಿನಹೊಳೆ ಯೋಜನೆಯ ಕೆಲಸ ಆಗಬೇಕು. ಇವತ್ತು ಗುತ್ತಿಗೆದಾರರ ಸಭೆ ಕರೆದಿದ್ದೆ. ಈಗ ನಾಳೆ, ನಾಡಿದ್ದು ಆ ಸಭೆ ಮಾಡುತ್ತೇನೆ‌. ಏನು ಸಮಸ್ಯೆ ಇದೆ ಅಂತ ನೋಡೋದಕ್ಕೆ‌ ಹೋಗುತ್ತೇನೆ. ಟೆಕ್ನಿಕಲ್ ಸಮಸ್ಯೆ ಬಗ್ಗೆ ಪರಿಶೀಲಿಸುತ್ತೇನೆ. ಜನರ, ಶಾಸಕರ ಅಭಿಪ್ರಾಯ ಕೇಳುತ್ತೇನೆ. ಕೇಂದ್ರ ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದು, ಹಾಗಾಗಿ ಸಭೆ ಮುಂದಕ್ಕೆ ಹಾಕಿದ್ದೇವೆ ಎಂದು ತಿಳಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!