ಹೊಸದಿಗಂತ ವರದಿ,ಕಲಬುರಗಿ:
ರಾಜ್ಯದಲ್ಲಿ ದ್ವೆಷದ ರಾಜಕಾರಣ ಪ್ರಾರಂಭ ಮಾಡಿದ್ದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಅವರು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಕ್ಕಿ ವಿಚಾರದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದರು.
ಗೋಹತ್ಯೆ ಕಾಯ್ದೆ ವಾಪಸ್ ತೆಗೆದುಕೊಳ್ಳುತ್ತಿದ್ದಾರೆ.ಪಠ್ಯ ಪುಸ್ತಕ ಬದಲಾವಣೆ ತಂದರು. ಹಿಂದೂ ಸಂಘಟನೆಯ ಕಾಯ೯ಕತ೯ರನ್ನು ಬಂಧಿಸಲು ಸೂಚಿಸಿದ್ದಾರೆ.ಇದು ದ್ವೇಷದ ರಾಜಕಾರಣ ಅಲ್ಲದೆ, ಬೇರೆನೂ ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದ ನಾಯಕನ ಅವಶ್ಯಕತೆ ಇರುವುದು ಅಧಿವೇಶನದ ಸಮಯದಲ್ಲಿ. ಹೀಗಾಗಿ ವಿರೋಧ ಪಕ್ಷದ ನಾಯಕನ ಆಯ್ಕೆ ಅಧಿವೇಶನ ಒಳಗೆ ಮಾಡುತ್ತೇವೆ ಎಂದರು.
ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ನೀಡುತ್ತಿದೆ.ಕೇಂದ್ರ ಸಕಾ೯ರದ ಬಿಟ್ಟು ಇವರು ಮೊದಲು ಹೇಳಿದಂತೆ ಹತ್ತು ಕೆಜಿ ಅಕ್ಕಿ ನೀಡಲಿ ಎಂದ ಅವರು, ಮೊದಲು ಹೇಳಿದಂತೆ ಅಕ್ಕಿ ಕೊಡಲಿ.ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಮುಂದಿನ ತಿಂಗಳಿನಿಂದ ವೇತನ ಕೊಡಲಿ ಹಾಗೂ ಹೆಚ್ಚಳ ಮಾಡಿರುವ ವಿದ್ಯುತ್ ದರ ಕಡಿಮೆ ಮಾಡಲಿ ಎಂದು ಹೇಳಿದರು.