Saturday, December 13, 2025

ಸಿದ್ದರಾಮಯ್ಯ ದಾಖಲೆಯ ಸಿಎಂ ಆಗ್ತಾರೆ ಬಿಡಿ: ಡಿಕೆಶಿ ಕಾಲೆಳೆದ ಯತ್ನಾಳ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿದ್ದರಾಮಯ್ಯ ಐದು ವರ್ಷ ಅವಧಿ ಪೂರ್ಣಗೊಳಿಸುವ ಮೂಲಕ ದಾಖಲೆ ಸಿಎಂ ಆಗ್ತಾರೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುರುವಾರ ವಿಧಾನಸಭೆಯಲ್ಲಿ ಹೇಳುವ ಮೂಲಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.

ಉತ್ತರ ಕರ್ನಾಟಕ ಭಾಗದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಯತ್ನಾಳ್, 1950 ರಿಂದ ದಕ್ಷಿಣ ಕರ್ನಾಟಕದವರು 15 ಜನ ಮುಖ್ಯಮಂತ್ರಿ ಗಳಾಗಿದ್ದಾರೆ. ಉತ್ತರ ಕರ್ನಾಟಕ ದವರು 8 ಬಾರಿ ಆಗಿದ್ದಾರೆ. ಯಾವ ಮುಖ್ಯಮಂತ್ರಿಯೂ ಐದು ವರ್ಷಗಳನ್ನು ಪೂರೈಸಿಲ್ಲ. ಆರು ತಿಂಗಳು, ಒಂದು ವರ್ಷ ಅಂತಾ ಏನಾದರೂ ಭ್ರಷ್ಟಾಚಾರ ಆರೋಪ ಬಂದ ಇಳಿಸಿ ಅಲ್ಲಿಗೆ ಮತ್ತೊಬ್ಬ ಗಿರಾಕಿ ಯನ್ನು ತಂದು ಕೂರಿಸುತ್ತಾರೆ ಎಂದರು.

ಬಹುಶಃ ಸಿದ್ದರಾಮಯ್ಯನೇ ಇತಿಹಾಸ ರಚನೆ ಮಾಡ್ತಿದ್ದಾರೆ. ಅದಕ್ಕಾಗಿಯೇ ನಮ್ಮ ಸಿದ್ದರಾಮಯ್ಯ ಆ ದಿನಗಳನ್ನು ಕಾಯ್ತಾ ಇದ್ದಾರೆ. ದೇವರಾಜ್ ಅರಸ್ ದಾಖಲೆ ಮುರಿದು, ಇನ್ನೂ ಮುಂದುವರಿದು ಆಮೇಲೆ ಯೋಚನೆ ಮಾಡ್ತೀನಿ ಅಂದಿದ್ದಾರೆ ಹೊರತು ಕುರ್ಚಿ ಬಿಡುತ್ತೇನೆ ಅಂತಾ ಹೇಳಿಲ್ಲ ಎಂದು ಡಿಕೆಶಿಗೆ ಟಾಂಗ್ ಕೊಟ್ಟರು.

error: Content is protected !!