ಹೊಸ ದಿಗಂತ ವರದಿ , ವಿಜಯಪುರ:
ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಅನಾರೋಗ್ಯ ಹಿನ್ನೆಲೆ ಶ್ರೀಗಳ ಆರೋಗ್ಯ ವಿಚಾರಿಸಲು ಜ್ಞಾನ ಯೋಗಾಶ್ರಮಕ್ಕೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಬುಧವಾರ ಭೇಟಿ ನೀಡಿದರು.
ನಗರದ ಜ್ಞಾನ ಯೋಗಾಶ್ರಮದ ಆವರಣದಲ್ಲಿ ಭಕ್ತರಿಗೆ ದರುಶನ ನೀಡಿದ ಬಳಿಕ ವಿಶ್ರಾಂತಿಗೆ ತೆರಳಿರುವ ಸಿದ್ಧೇಶ್ವರ ಶ್ರೀಗಳ ಕೊಠಡಿಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹಾಗೂ ಇತರೆ ಮುಖಂಡರು ಶ್ರೀಗಳ ದರುಶನ ಪಡೆದರು.
ಸ್ವಾಮೀಜಿಗಳ ದರ್ಶನದ ಬಳಿಕ ಸಚಿವರು ಮಾತನಾಡಿ, ನೈತಿಕ ಶಿಕ್ಷಣದ ಬಗ್ಗೆ ಸ್ವಾಮೀಜಿಗಳ ಗಮನಕ್ಕೆ ತಂದಿದ್ದೇನೆ. ನೈತಿಕ ಶಿಕ್ಷಣದ ವಿಚಾರವಾಗಿ ಮುಂಬರುವ ದಿನಗಳಲ್ಲಿ ಒಂದು ಸಮಾವೇಶ ಆಯೋಜನೆ ಮಾಡಲಾಗುತ್ತದೆ ಎಂದರು.