ಸಿದ್ದು, ಡಿಕೆಶಿ ರಾಜಕಾರಣ ಕೆಳಮಟ್ಟಕ್ಕೆ ಹೋಗಿದೆ : ಸಚಿವ ಪೂಜಾರಿ

ಹೊಸದಿಗಂತ ವರದಿ ಬಾಗಲಕೋಟೆ :
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಡಿಕೆಶಿ ರಾಜಕಾರಣ ಅತ್ಯಂತ ಕೆಳಮಟ್ಟಕ್ಕೆ ಹೋಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ನಗರಕ್ಕೆ ಭಾನುವಾರ ಭೇಟಿ‌ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ವಿರುದ್ಧ ಸಿದ್ದರಾಮಯ್ಯ ಮತ್ತು ಡಿಕೆಶಿ ಹರಿಹಾಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಆರೆಸ್ಸೆಸ್ ಬಗ್ಗೆ ಡಿಕೆಶಿ, ಸಿದ್ದುಗೆ ಯಾಕಿಷ್ಟು ಗಡಿಬಿಡಿ ನನಗೆ ಅರ್ಥವಾಗುತ್ತಿಲ್ಲ ನೆಹರು ಪ್ರಧಾನಿಯಾಗಿದ್ದಾಗ ಆರೆಸ್ಸೆಸ್ ಪಥಸಂಚಲನಕ್ಕೆ ಅವಕಾಶ ನೀಡಿದ್ದರು . ನೆಹರೂಗಿಂತ ಸಿದ್ದು, ಡಿಕೆಶಿಯವರೇನು ದೊಡ್ಡವರಲ್ಲ ಎಂದರು.

ಪ್ರಣಬ್ ಮುಖರ್ಜಿ ಸಂಘದ ನಾಗಪೂರ ಕಚೇರಿಗೆ ಬಂದು ಉದ್ಘಾಟನೆ ಮಾಡಿದ್ದರು. ಆರೆಸ್ಸೆಸ್ ಇದೊಂದು ರಾಷ್ಟ್ರಭಕ್ತ ಸಂಘಟನೆ ಅಂತ ಉದ್ಘಾಟಿಸಿದ್ದಾರೆ ಎಂಬುದನ್ನು ನೆನಪಿಟ್ಟು ಕೊಂಡು‌ ಮಾತನಾಡಬೇಕು ಎಂದರು.

ಆರೆಸ್ಸೆಸ್ ಬಗ್ಗೆ ಗೊತ್ತಿಲ್ಲದಿದ್ದರೆ ಇವರು ಒಮ್ಮೆ ಹಿಂದಿನ ಇತಿಹಾಸ ತಿಳಿದುಕೊಳ್ಳಬೇಕು . ಚಡ್ಡಿ ಸುಡುವ ವಿಚಾರದಲ್ಲಿ ಇವರಿಗೆ ಪ್ರತಿಕ್ರಿಯೆ ಕೊಡುವ ಅಗತ್ಯವಿಲ್ಲ ಎಂದರು.

ಆರೆಸ್ಸೆಸ್ ನ ಸೈದ್ದಾಂತಿಕ ವಿಚಾರದಲ್ಲಿ ಅವರ ಉಡುಪು, ಸಮವಸ್ತ್ರ ಸುಡುತ್ತೇವೆ ಎನ್ನುತ್ತಿದ್ದಾರೆ.ಅವರೇನು ಮಾಡಿದ್ರೂ ಪ್ರತಿಕ್ರಿಯೆ ನೀಡುವಷ್ಟು ಶಕ್ತಿ ಬಿಜೆಪಿ ಮತ್ತು ಆರೆಸ್ಸೆಸ್ ಗೆ ಇದೆ ಎಂದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!