ಸಿದ್ರಾಮಯ್ಯಂಗೆ ವಯಸ್ಸಾಗಿದೆ, ನಿವೃತ್ತಿ ಟೈಮು, ಜನರೇ ಮನೆಗ್ ಕಳಿಸ್ತಾರೆ: ಮುನಿಸ್ವಾಮಿ

ಹೊಸದಿಗಂತ ವರದಿ  ಹುಬ್ಬಳ್ಳಿ:

ಸಿದ್ದರಾಮಯ್ಯ ಅವರದ್ದು, ನಿವೃತ್ತಿ ವಯಸ್ಸಾಗಿದ್ದು, ಜನರೇ ಅವರನ್ನು ಮನೆಗೆ ಕಳುಹಿಸಲು ತೀರ್ಮಾನಿಸಿದ್ದಾರೆ ಎಂದು ಕೋಲಾರ ಸಂಸದ ಎ. ಮುನಿಸ್ವಾಮಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಡ್ರಾಮಾ ಕಂಪನಿ ತಂಡ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ದೆಹಲಿಗೆ ತೆರಳಿದ್ದರು. ಆದರೆ, ಪ್ರಧಾನಮಂತ್ರಿ ಮೋದಿ ಅವರು ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ಅನುದಾನ ಹಂಚಿಕೆ ವಿಷಯದಲ್ಲಿ ಸಿದ್ದರಾಮಯ್ಯ ಸುಮ್ಮನೆ ಕೇಂದ್ರದ ಮೇಲೆ ಗೂಬೆ ಕೂರಿಸುವಂತಹ ಕೆಲಸ ಮಾಡುತ್ತಿದ್ದಾರೆ. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂದರು.

ಕಾಂಗ್ರೆಸ್ ನವರ ಗ್ಯಾರಂಟಿಗಳಿಗೆ ವಾರೆಂಟಿ ಇಲ್ಲ. ಅವುಗಳು ಅಳುವಿನಂಚಿನಲ್ಲಿವೆ. ಹೀಗಾಗಿ ಇನ್ನಿಲ್ಲದ ಗಿಮಿಕ್ ಕಾಂಗ್ರೆಸ್ ನವರು ಮಾಡುತ್ತಿದ್ದಾರೆ. ಮನೆಗೆ ನೀರು ಬಾರದಿದ್ದರೂ ಮೋದಿಯತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!