ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆಗಮನ ಹಿನ್ನೆಲೆ HAL ಏರ್ ಪೋರ್ಟ್ ಬಳಿ ಬಿಗಿ ಭದ್ರತೆ ಒದಗಿಸಲಾಗಿದೆ. ದೆಹಲಿಯಿಂದ ಹೊರಟ ನಿಯೋಜಿತ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಬಂದಿಳಿಯಲಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ.
‘ಸಿದ್ದರಾಮಯ್ಯ’ ಸ್ವಾಗತಕ್ಕೆ ಸಿದ್ದತೆ ನಡೆಸಿರುವ ಅಭಿಮಾನಿಗಳು ಚೆಂಡು ಹೂ ಸೇರಿದಂತೆ ವಿವಿಧ ಹೂಗಳನ್ನು ಸಿದ್ದ ಮಾಡಿಕೊಂಡಿದ್ದಾರೆ. ಡೊಳ್ಳು ಕುಣಿತದ ತಂಡಗಳು, ತಲೆ ಮೇಲೆ ದೇವರನ್ನು ಹೊತ್ತು ಕುಣಿಯುವ ತಂಡ ಸಾಂಪ್ರದಾಯಿಕ ಉಡುಗೆ ಮತ್ತು ವಾದ್ಯಮೇಳಗಳೊಂದಿಗೆ ಏರ್ ಪೋರ್ಟ್ ಬಳಿ ಸಿದ್ದರಾಗಿ ನಿಂತಿದೆ.
ರಸ್ತೆಯಲ್ಲಿ ರಂಗೋಲಿ ಹಾಕಿ ಸಿಂಗರಿಸಲಾಗಿದ್ದು, ವಿವಿಧ ಕಲಾ ತಂಡಗಳು ಸಿದ್ದರಾಮಯ್ಯಗೆ ಸ್ವಾಗತ ಕೋರಲು ಸಜ್ಜಾಗಿದೆ. ಈ ಮೂಲಕ ನೂತನ ಸಿಎಂ ಗೆ ಭರ್ಜರಿ ಸ್ವಾಗತ ಕೋರಲಿದ್ದಾರೆ. 2 ನೇ ಬಾರಿಗೆ ಸಿದ್ದರಾಮಯ್ಯಗೆ ಸಿಎಂ ಪಟ್ಟ ಸಿಕ್ಕಿದ್ದು, ಈ ಹಿನ್ನೆಲೆ ಸಿದ್ದರಾಮಯ್ಯ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.