WOMEN| ಮಾತ್ರೆ ತೆಗೆದುಕೊಂಡು ಪೀರಿಯಡ್ಸ್‌ ಪೋಸ್ಟ್‌ಪೋನ್ ಮಾಡ್ತಿದೀರಾ? ಇರಲಿ‌ ಎಚ್ಚರ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೆಣ್ಣು ಮಕ್ಕಳಿಗೆ ಮುಟ್ಟು ಸಹಜ ಪ್ರಕ್ರಿಯೆ. ಪೀರಿಯಡ್ಸ್‌ ಬಂದರೆ ದೈಹಿಕ, ಮಾನಸಿಕ ಹಿಂಸೆ ಮಹಿಳೆಯರನ್ನು ಚಿಂತೆಗೀಡುಮಾಡುತ್ತದೆ. ಕೆಲವರಿಗೆ ಋತುಸ್ರಾವದ ಸಮಯದಲ್ಲಿ ಪೂಜೆ, ಪುನಸ್ಕಾರ, ಮದುವೆ ಮುಂತಾದ ಕಾರ್ಯಕ್ರಮಗಳಿದ್ದರೆ, ಅವುಗಳಿಗಾಗಿ ಮಾತ್ರೆ ತೆಗದುಕೊಂಡು ಪೀರಿಯಡ್ಸ್‌ ಅನ್ನು ಮುಂದೂಡುವುದು ಇತ್ತೀಚೆಗೆ ರೂಢಿಯಿದೆ. ಆದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ಇವುಗಳ ಬಳಕೆಯಿಂದ ಹಾರ್ಮೋನ್ ಅಸಮತೋಲನ ಉಂಟಾಗುತ್ತದೆ. ನಿದ್ರೆ, ಲೈಂಗಿಕ ಸಾಮರ್ಥ್ಯ, ಭಾವನೆಗಳು, ಆಲೋಚನೆಗಳು ಎಲ್ಲವನ್ನೂ ಬದಲಾಗುವಂತೆ ಮಾಡುತ್ತದೆ. ಇಷ್ಟೇ ಅಲ್ಲದೆ ವಾಕರಿಕೆ, ತಲೆನೋವು, ಸ್ತನ ಮೃದುತ್ವ, ಉಬ್ಬುವುದು, ಮುಟ್ಟಿನ ರಕ್ತಸ್ರಾವದ ಮಾದರಿಗಳಲ್ಲಿನ ಬದಲಾವಣೆಗಳಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.

ಮುಂದಿನ ದಿನಗಳಲ್ಲಿ ಪಿರಿಯಡ್ಸ್ ಅನಿಯಮಿತವಾಗಬಹುದು. ಆದುದರಿಂದಲೇ ಪುಣ್ಯ ಕಾರ್ಯಗಳು, ಪೂಜೆಗಳು, ಪುನಸ್ಕಾರಗಳು, ಮದುವೆಗಳು ಮುಂತಾದ ಮಾಸಿಕ ಅವಧಿಯನ್ನು ಮುಂದೂಡಲು ಇಂತಹ ಔಷಧಗಳನ್ನು ಸೇವಿಸಿ ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!