ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಆ್ಯಕ್ಷನ್ ಎಂಟರ್‌ಟೈನರ್ ‘ಸಿಕಂದರ್’ ಇದೇ ಮಾರ್ಚ್ 30ರಂದು ಅದ್ಧೂರಿ ರಿಲೀಸ್ ಆಗುತ್ತಿದೆ.
ಸಿನಿಮಾ ಆಡ್ವಾನ್ಸ್ ಬುಕಿಂಗ್ ಪ್ರಾರಂಭವಾಗಿದ್ದು, ಉತ್ತಮ ವ್ಯವಹಾರ ನಡೆಸುತ್ತಿದೆ. ಎ.ಆರ್.ಮುರುಗದಾಸ್ ನಿರ್ದೇಶನದ ಚಿತ್ರವನ್ನು ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ್ದು, ಪ್ರೇಕ್ಷಕರನ್ನು ಮನರಂಜಿಸುವ ಭರವಸೆ ದೊಡ್ಡ ಮಟ್ಟದಲ್ಲೇ ಇದೆ.
ಸಿಕಂದರ್ ಚಿತ್ರತಂಡ 5 ದಿನಗಳ ಮುಂಚಿತವಾಗಿ ಅಡ್ವಾನ್ಸ್ ಟಿಕೆಟ್ ಬುಕಿಂಗ್ ತೆರೆದಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಮೊದಲ ದಿನದ ಮಧ್ಯಾಹ್ನ 3 ಗಂಟೆಗೂ ಮೊದಲು, ಸಿಕಂದರ್ ಹಿಂದಿ 2Dಯಲ್ಲಿ 5,310 ಪ್ರದರ್ಶನಗಳಿಗೆ 41,180 ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ 1.33 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಚಿತ್ರದ ಒಟ್ಟು ಗಳಿಕೆ 3.6 ಕೋಟಿ ರೂಪಾಯಿ ದಾಟಿದೆ. ಈ ಅಂಕಿಅಂಶಗಳು ಏರಿಕೆ ಕಾಣುತ್ತಿದೆ.