ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುತ್ ಹತ್ಯೆಗೆ ಸಂಚು ರೂಪಿಸಿದವರಿಗೆ ಶಿಕ್ಷೆ ನೀಡಿ ಎಂದು ಅಮೆರಿಕಾ ಆಗ್ರಹಿಸಿದೆ.
ಭಾರತ, ಅಮೆರಿಕ ಕಾರ್ಯತಂತ್ರದ ಪಾಲುದಾರ ಹಾಗೂ ಅಮೆರಿಕ ಪ್ರಜೆಯಾಗಿರುವ ಪನ್ನುನ್ ಹತ್ಯೆಯ ಬಗ್ಗೆ ತನಿಖೆಯಾಗಬೇಕು ಎಂದು ರಾಷ್ಟ್ರೀಯ ಭದ್ರತಾ ವಕ್ತಾರಾ ಜಾನ್ ಕಿರ್ಬಿ ಹೇಳಿದ್ದಾರೆ.
ಭಾರತವು ಕಾರ್ಯತಂತ್ರದ ಪಾಲುದಾರ, ಈ ಪಾಲುದಾರಿಕೆಯನ್ನು ಆಳಗೊಳಿಸಲು ಬಯಸುತ್ತೇವೆ, ಅಮೆರಿಕ-ಭಾರತ ಸ್ವಾಡ್ ಸದಸ್ಯ ರಾಷ್ಟ್ರಗಳೂ ಆಗಿವೆ. ಅನೇಕ ಸಮಸ್ಯೆಗಳನ್ನು ನಾವು ಬಗೆಹರಿಸಿಕೊಂಡಿದ್ದೇವೆ, ಹಿಂದೆಯೂ ಬಗೆಹರಿಸಿಕೊಳ್ಳುತ್ತಾ ಬಂದಿದ್ದೇವೆ. ಇದು ನಿರಂತರವಾಗಿರಲಿ ಎನ್ನುವುದು ನಮ್ಮ ಆಶಯ ಎಂದಿದ್ದಾರೆ.
ಪನ್ನುನ್ ಹತ್ಯೆ ಬಗ್ಗೆ ಸಂಪೂರ್ಣ ತನಿಖೆಯಾಗಲಿದೆ. ಈ ಪ್ರಕರಣದ ಹಿಂದೆ ಯಾರಿದ್ದಾರೋ ಅವರನ್ನು ನೇರ ಹೊಣೆ ಮಾಡಬೇಕು ಎಂದು ಒತ್ತಾಯಿಸುತ್ತೇವೆ. ಭಾರತ ಈ ಪ್ರಕರಣವನ್ನು ಗಂಭೀರವಾಗಿ ತೆಗದುಕೊಂಡಿದ್ದು ಸಂತಸ ನೀಡಿದೆ, ತನಿಖೆ ಮುಗಿದ ಮೇಲೆ ಮಾತನಾಡುತ್ತೇವೆ ಎಂದಿದ್ದಾರೆ.