ಪ್ರಧಾನಿ ಮೋದಿ WhatsAPP ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್: 24 ಗಂಟೆಯಲ್ಲಿ 10 ಲಕ್ಷಕ್ಕೂ ಅಧಿಕ ಫಾಲೋಯರ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರ ವಾಟ್ಸಾಪ್ ಚಾನೆಲ್ ಶುರುವಾಗಿದ್ದು, ಬುಧವಾರ ಸಂಜೆಯ ವೇಳೆಗೆ 1 ಮಿಲಿಯನ್(10 ಲಕ್ಷ) ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ.

ಪ್ರಧಾನ ಮಂತ್ರಿಗಳ ವಾಟ್ಸಾಪ್ ಚಾನೆಲ್‌ ಅನ್ನು 1,000,386 ಜನರು ಅದನ್ನು ಅನುಸರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯು ಭಾರೀ ಹೆಚ್ಚಾಗಲಿದೆ.

ಈ ಕುರಿತು ಮೋದಿ ಮಾಹಿತಿ ನೀಡಿದ್ದು, ಇಂದು ನನ್ನ ವಾಟ್ಸಾಪ್ ಚಾನೆಲ್ ಅನ್ನು ಪ್ರಾರಂಭಿಸಿದೆ. ಮಾಧ್ಯಮದ ಮೂಲಕ ಸಂಪರ್ಕದಲ್ಲಿ ಉಳಿಯಲು ಎದುರು ನೋಡುತ್ತಿದ್ದೇನೆ. ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಸೇರಿಕೊಳ್ಳಿ, ಎಂದು ಅವರು ಮಂಗಳವಾರ ಎಕ್ಸ್(ಹಿಂದಿನ ಟ್ವಿಟರ್) ನಲ್ಲಿ ಪ್ರಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ಮೋದಿಯವರ ವಾಟ್ಸಾಪ್ ಚಾನೆಲ್ ಸೇರುವುದು ಹೇಗೆ?

WhatsApp ಗೆ ಹೋಗಿ ಮತ್ತು ‘ಅಪ್‌ಡೇಟ್‌ಗಳು’ ಟ್ಯಾಬ್‌ಗೆ ನ್ಯಾವಿಗೇಟ್ ಮಾಡಿ.

ಪರದೆಯ ಕೆಳಭಾಗದಲ್ಲಿ ‘ಚಾನೆಲ್‌ಗಳನ್ನು ಹುಡುಕಿ’ ಟ್ಯಾಪ್ ಮಾಡಿ.

ನೀವು ಪ್ರಧಾನಿ ಮೋದಿಯವರನ್ನೂ ಒಳಗೊಂಡಂತೆ ಚಾನಲ್‌ಗಳ ಪಟ್ಟಿಯನ್ನು ನೋಡುತ್ತೀರಿ; ಪರ್ಯಾಯವಾಗಿ, ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ‘ಹುಡುಕಾಟ’ ಆಯ್ಕೆಯನ್ನು ಬಳಸಿಕೊಂಡು ನೀವು ಅದನ್ನು ಹಸ್ತಚಾಲಿತವಾಗಿ ಪತ್ತೆ ಮಾಡಬಹುದು (ಅಥವಾ, ಇಲ್ಲಿ ಕ್ಲಿಕ್ ಮಾಡಿ).

ಸೇರಲು, ಚಾನಲ್ ಹೆಸರಿನ ಪಕ್ಕದಲ್ಲಿರುವ ‘+’ ಐಕಾನ್ ಅನ್ನು ಟ್ಯಾಪ್ ಮಾಡಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here