ಬಾಲಿವುಡ್ ನಟಿ ದಿವ್ಯ ಸೇತ್ ಕುಟುಂಬದಲ್ಲಿ ಆವರಿಸಿದ ಮೌನ: ಪುತ್ರಿ ಮಿಹಿಕಾ ಸೇತ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ದಿವ್ಯ ಸೇತ್ ಕುಟುಂಬದಲ್ಲಿ ಮೌನ ಆವರಿಸಿದೆ. ದಿವ್ಯ ಸೇತ್ ಪುತ್ರಿ ಮಿಹಿಕಾ ಸೇತ್ ಶಾ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಇತ್ತೀಚೆಗಷ್ಟೇ ತಾಯಿ ಹಾಗೂ ಅಜ್ಜಿ ಜೊತೆ ಕಾಣಿಸಿಕೊಂಡ ಪೋಟೋವನ್ನು ಮಿಹಿಕಾ ಸೇತ್ ಹಂಚಿಕೊಂಡಿದ್ದರು. ಈ ಸಂಭ್ರಮದ ಕ್ಷಣದ ಒಂದೇ ವಾರದಲ್ಲಿ ಮಿಹಿಕಾ ಸೇತ್ ಮೃತಪಟ್ಟಿದ್ದಾರೆ.

ಕೆಲ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಿಹಿಕಾ ಸೇತ್ ಆಗಸ್ಟ್ ತಿಂಗಳ ಆರಂಭದಲ್ಲಿ ಜ್ವರ ಕಾಣಿಸಿಕೊಂಡಿದೆ. ಆಸ್ಪತ್ರೆ ದಾಖಲಾದ ಮಹಿಕಾ ಚೇತರಿಸಿಕೊಳ್ಳಲಿಲ್ಲ. ದಿನದಿಂದ ದಿನಕ್ಕೆ ಆರೋಗ್ಯ ಕ್ಷೀಣಿಸಿದೆ. ಆಗಸ್ಟ್ 5ರ ಸಂಜೆ ಮಿಹಿಕಾ ಮೃತಪಟ್ಟಿದ್ದಾರೆ.

ಈ ಕುರಿತು ತಾಯಿ ದಿವ್ಯ ಸೇತ್ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.ಆಗಸ್ಟ್ 8 ರಂದು ಮಿಹಿಕಾ ಸೇತ್ ಗೌರವ ನಮನ ಪ್ರಾರ್ಥನೆ ನಡೆಯಲಿದೆ ಎಂದು ದಿವ್ಯ ಸೇತ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.

ಜಬ್ ವಿ ಮೆಟ್ ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ದಿವ್ಯ ಸೇತ್, ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟಿ ಸುಷ್ಮಾ ಸೇತ್ ಪುತ್ರಿ. ಜುಲೈ 29 ರಂದು ದಿವ್ಯ ಸೇತ್, ಸುಷ್ಮಾ ಸೇತ್ ಹಾಗೂ ಮಹಿಕಾ ಸೇತ್ ಜೊತೆಯಾಗಿರುವ ಫೋಟೋ ಹಂಚಿಕೊಂಡಿದ್ದರು. ಮೂರು ತಲೆಮಾರಿನ ಫೋಟೋ ಹಂಚಿಕೊಂಡು ಸಂಭ್ರಮಪಟ್ಟಿದ್ದರು.

ರಂಗಭೂಮಿ ನಟಿಯಾಗಿ, ಬಾಲಿವುಡ್ ನಟಿಯಾಗಿ ಹೆಸರು ಮಾಡಿರುವ ಸುಷ್ಮಾ ಸೇತ್ ಹಲವು ಸೂಪರ್ ಹಿಟ್ ಚಿತ್ರ ನೀಡಿದ್ದಾರೆ. 1978ರಲ್ಲಿ ಬಾಲಿವುಡ್‌ನ ಜೂನೂನ್ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಕಾಲಿಟ್ಟ ಸುಷ್ಮಾ ಸೇತ್, ಸಿಲ್ಸಿಲಾ, ಪ್ರೇಮ್ ರೋಗ್, ರಾಮ್ ತೇರಿ ಗಂಗಾ ಮೈಲಿ, ದೀವಾನಾ ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!