ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯ ಮೇಲಿನ ನಿಷೇಧ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಜನವರಿ 18ರಂದೇ ವಿಚಾರಣೆ ಪರಿಗಣಿಸಲಾಗಿದೆ.ಆದರೆ, ಈ ವರೆಗೆ ದಿನ ನಿಗದಿಯಾಗಿಲ್ಲ’ ಎಂದು ಅರ್ಜಿದಾರರ ಪರ ವಕೀಲರು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸಾಂವಿಧಾನಿಕ ಪೀಠವು ಮುಂದಿನ ವಾರ ನಡೆಸಲಿದೆ. ಅದರ ಬಳಿಕ ಈ ಅರ್ಜಿಗಳನ್ನು ವಿಚಾರಣೆಗೆ ನಿಗದಿ ಮಾಡಿ’ ಎಂದು ತಿಳಿಸಿದೆ.
2001ರಲ್ಲಿ ಸಿಮಿ ಸಂಘಟನೆಯನ್ನು ಮೊದಲ ಬಾರಿಗೆ ನಿಷೇಧಿಸಲಾಯಿತು. 2019ರಲ್ಲಿ ನಿಷೇಧವನ್ನು ಮತ್ತೆ 5 ವರ್ಷಗಳ ಕಾಲ ವಿಸ್ತರಿಸಲಾಯಿತು. ಈ ವರೆಗೆ ಸತತ ಎಂಟು ಬಾರಿ ನಿಷೇಧ ವಿಸ್ತರಣೆಯಾಗಿದೆ.