May 13, 2026
Wednesday, May 13, 2026
spot_img

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುತ್ತಿದೆಯೇ? ಹಾಗಾದ್ರೆ ಇಲ್ಲಿದೆ ನೋಡಿ ಸರಳ ಕಿಚನ್ ಟಿಪ್ಸ್!

ಅಡುಗೆ ಮನೆಯಲ್ಲಿ ಈರುಳ್ಳಿ ಇಲ್ಲದೆ ಯಾವುದೇ ರುಚಿಕರವಾದ ಅಡುಗೆ ಮಾಡುವುದು ಕಷ್ಟ. ಆದರೆ ಅದೇ ಈರುಳ್ಳಿಯನ್ನು ಕತ್ತರಿಸಲು ಶುರು ಮಾಡಿದರೆ ಸಾಕು, ಕಣ್ಣಿನಲ್ಲಿ ನೀರು ಬರಲು ಆರಂಭವಾಗುತ್ತದೆ. ಇದಕ್ಕೆ ಈರುಳ್ಳಿಯಲ್ಲಿರುವ ‘ಸೈನ್‌-ಪ್ರೊಪಾನೆಥಿಯಲ್-ಎಸ್‌-ಆಕ್ಸೈಡ್’ ಎಂಬ ನೈಸರ್ಗಿಕ ಗ್ಯಾಸ್ ಕಾರಣ. ಇದು ನಮ್ಮ ಕಣ್ಣುಗಳನ್ನು ತಲುಪಿದಾಗ ಉರಿ ಮತ್ತು ಕಣ್ಣೀರು ಉಂಟಾಗುತ್ತದೆ. ಆದರೆ ಕೆಲವು ಸರಳ ಮತ್ತು ಚಮತ್ಕಾರಿ ಕಿಚನ್ ಟಿಪ್ಸ್‌ಗಳನ್ನು ಬಳಸುವ ಮೂಲಕ ನಾವು ಯಾವುದೇ ಕಣ್ಣೀರು ಇಲ್ಲದೆ, ಅತ್ಯಂತ ಸುಲಭವಾಗಿ ಈರುಳ್ಳಿಯನ್ನು ಹೆಚ್ಚಬಹುದು. ಆ ಉಪಯುಕ್ತ ಟಿಪ್ಸ್‌ಗಳು ಯಾವುವು ಎಂಬುದನ್ನು ತಿಳಿಯೋಣ.

ಈರುಳ್ಳಿ ಹೆಚ್ಚುವಾಗ ಅನುಸರಿಸುವ ಕೆಲವು ಟಿಪ್ಸ್:

ಈರುಳ್ಳಿ ಕತ್ತರಿಸುವ 10 ರಿಂದ 15 ನಿಮಿಷಗಳ ಮುನ್ನ ಅದನ್ನು ಫ್ರಿಡ್ಜ್‌ನಲ್ಲಿ ಇಡಿ. ತಂಪಾದ ವಾತಾವರಣವು ಕಣ್ಣೀರು ತರಿಸುವ ಕೆಮಿಕಲ್ ಬಿಡುಗಡೆಯಾಗುವುದನ್ನು ನಿಧಾನಗೊಳಿಸುತ್ತದೆ.

ಈರುಳ್ಳಿಯ ಸಿಪ್ಪೆ ಸುಲಿದು, ಎರಡು ಭಾಗ ಮಾಡಿ 5 ನಿಮಿಷಗಳ ಕಾಲ ತಣ್ಣೀರಿನಲ್ಲಿ ಮುಳುಗಿಸಿ ಇಟ್ಟು, ನಂತರ ಹೆಚ್ಚಿದರೆ ಆಗ ಕಣ್ಣಿನಲ್ಲಿ ನೀರು ಬರುವುದಿಲ್ಲ.

ಯಾವಾಗಲೂ ಈರುಳ್ಳಿ ಹೆಚ್ಚುವಾಗ ಹರಿತವಾದ ಚಾಕುವನ್ನೇ ಬಳಸಿ. ಮೊಂಡಾದ ಚಾಕುವಿನಿಂದ ಹೆಚ್ಚಿದಾಗ ಈರುಳ್ಳಿಯ ಕೋಶಗಳು ಹೆಚ್ಚು ಜಜ್ಜಲ್ಪಟ್ಟು ಗ್ಯಾಸ್ ವೇಗವಾಗಿ ಹೊರಬರುತ್ತದೆ. ಅದು ಕಣ್ಣೀರಿಗೆ ಕಾರಣವಾಗುತ್ತದೆ.

ಈರುಳ್ಳಿಯ ಬುಡದ ಭಾಗದಲ್ಲಿ ಅತಿ ಹೆಚ್ಚು ಕಣ್ಣೀರು ತರಿಸುವ ಅಂಶ ಇರುತ್ತದೆ. ಆದ್ದರಿಂದ ಮೊದಲು ಮೇಲ್ಭಾಗ ಕತ್ತರಿಸಿ, ಬುಡದ ಭಾಗವನ್ನು ಕೊನೆಯಲ್ಲಿ ಕತ್ತರಿಸಿ ತೆಗೆಯಬೇಕು.

ಈರುಳ್ಳಿ ಕತ್ತರಿಸುವ ಜಾಗದ ಪಕ್ಕದಲ್ಲಿ ಒಂದು ಮೇಣದಬತ್ತಿಯನ್ನು ಹಚ್ಚಿಟ್ಟರೆ, ಅದು ಈರುಳ್ಳಿಯಿಂದ ಬರುವ ಗ್ಯಾಸ್ ಅನ್ನು ತನ್ನ ಕಡೆಗೆ ಆಕರ್ಷಿಸುತ್ತದೆ. ಆಗ ಕಣ್ಣೀರು ಬರದಂತೆ ತೆಡೆಯುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !