ಹೊಸದಿಗಂತ ವರದಿ, ಕೊಪ್ಪಳ:
ತುಂಗಭದ್ರಾ ಎಡದಂಡೆ ಕಾಲುವೆಗೆ ಜು.10 ರಿಂದ ಹಾಗೂ ಬಲದಂಡೆ ಕಾಲುವೆಗೆ ಜು.12 ರಿಂದ ನೀರಿ ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ತಾಲೂಕಿನ ಮುನಿರಾಬಾದ್ ಕಾಡಾ ಕಚೇರಿಯಲ್ಲಿ ಮಂಗಳವಾರ 117ನೇ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜು. 10ರಿಂದ ನ.31 ವರೆಗೆ 4100 ಕ್ಯೂಸೆಕ್ ನಂತೆ ನೀರು ಹರಿಸಲಾಗುವುದು. ಕುಡಿಯುವ ನೀರಿಗಾಗಿ ಗಣೇಕಲ್ ಜಲಾಶಯ ತುಂಬುವ ವರೆಗೆ ಎಲ್ಲಾ ವಿತರಣಾ ಕಾಲುವೆ ಮುಚ್ಚಲಾಗುವುದು. ಬಲದಂಡ ಮೇಲ್ಮಟ್ಟದ ಕಾಲುವೆಗೆ ಜು.12ರಿಂದ ನ.30ವರೆಗೆ 1150 ಕ್ಯೂಸೆಕ್, ಬಲದಂಡೆ ಕೆಳಮಟ್ಟದ ಕಾಲುವೆಗೆ ಜು.15ರಿಂದ ನ.30ವರೆಗೆ 850 ಕ್ಯೂಸೆಕ್, ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜು.10ರಿಂದ ನ.30ವರೆಗೆ 25 ಕ್ಯೂಸೆಕ್ ಹಾಗೂ ರಾಯ, ಬಸವ ಕಾಲುವೆಗೆ ಜೂನ್ 1ರಿಂದ ನ.30ವರೆಗೆ 270 ಕ್ಯೂಸೆಕ್ ನಂತೆ ನೀರು ಬಿಡಲಾಗುವುದು ಎಂದರು.
ರಾಯ ಬಸವಣ್ಣ ಕಾಲುವೆಗೆ ಜು.1 ರಿಂದ ನ.30ರವರೆಗೆ 270 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು.ತುಂಗಭದ್ರಾ ಎಡದಂಡೆ ಮೇಲ್ಪಟ್ಟ ಕಾಲುವೆಗೆ ಜು.10ರಿಂದ 25 ಕ್ಯೂಸೆಕ್ಸ್ ನಂತೆ ನೀರು ಬಿಡುಗಡೆ ಮಾಡಲಾಗುವುದು ಎಂದರು.