ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರತೀಕಾರದ ಸಮರ ಇದೀಗ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಿನ್ನೆಯ ದಿನ ಭಾರತ ಮತ್ತು ಪಾಕಿಸ್ತಾನ ಸೇನೆ ಮಧ್ಯೆ ದೊಡ್ಡ ಮಟ್ಟದಲ್ಲಿ ಘರ್ಷಣೆ ನಡೆದಿದೆ.
ಹೀಗಾಗಿ ರಾತ್ರಿಯಿಡೀ ವಾರ್‌ರೂಮ್‌ನಲ್ಲೇ ವಾಸ್ತವ್ಯ ಹೂಡಿದ ಪ್ರದಾನಿ ಮೋದಿ ಎನ್‌ಎಸ್‌ಎ, ಸಿಡಿಎಸ್ ಅವರಿಂದ ದಾಳಿಯ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಮುಂದಿನ ಕ್ರಮಗಳ ಬಗ್ಗೆಯೂ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಪಾಕ್ 100 ಕ್ಷಿಪಣಿಗಳ ದಾಳಿ ನಡೆಸಿದ ಬಳಿಕ ಭಾರತ ಪ್ರತೀಕಾರದ ತೀವ್ರತೆಯನ್ನ ಮತ್ತಷ್ಟು ಹೆಚ್ಚಿಸಿದೆ. ಪಾಕಿಸ್ತಾನ ಸೇನೆ ಭಾರತದ ನಗರಗಳ ಮೇಲೆ ದಾಳಿಗೆ ವಿಫಲ ಯತ್ನ ಮಾಡಿದ ನಂತರ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಒಂದೆಡೆ, ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಆಕಾಶದಲ್ಲಿಯೇ ಹೊಡೆದುರುಳಿಸಿದರೆ, ಮತ್ತೊಂದಡೆ ಸಶಸ್ತ್ರ ಪಡೆಗಳು ಪಾಕಿಸ್ತಾನದ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಿವೆ.