ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕದನ ವಿರಾಮ ಬೆನ್ನಿಗೆ ತನ್ನ ನಾರಿ ಬುದ್ದಿ ತೋರಿದ ಪಾಕ್: ಭಾರತದ ಮೇಲೆ ಮತ್ತೆ ಡ್ರೋನ್ ದಾಳಿ
ಭಾರತ ಮತ್ತು ಪಾಕಿಸ್ತಾನ ಇಂದು ಸಂಜೆ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಮೂರೇ ಗಂಟೆಯಲ್ಲಿ ತನ್ನ ಚಾಳಿ ಬಿಡದ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ.
ರಾತ್ರಿ 8.45ರ ಸುಮಾರಿಗೆ ಜಮ್ಮುವಿನ ಉದಂಪುರ ಮತ್ತು ಸಾಂಬಾದಲ್ಲಿ ಡ್ರೋನ್ ಹಾಗೂ ಶೆಲ್ ದಾಳಿ ನಡೆಸಲಾಗಿದೆ. ಕಚ್ ಗಡಿಯಲ್ಲಿ ಹೊಸ ಡ್ರೋನ್‌ಗಳು ಪತ್ತೆಯಾಗಿವೆ, ಶ್ರೀನಗರದಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿದೆ.
ಜಮ್ಮು ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ 4-5 ಬಾರಿ ಸ್ಪೋಟ ಕೇಳಿಸಿದ್ದು,ಉಧಮ್‌ಪುರ ಶ್ರೀನಗರದಲ್ಲಿ ಬ್ಲಾಕ್ ಔಟ್ ಮಾಡಲಾಗಿದೆ.
ಪಾಕಿಸ್ತಾನವು ಕದನ ವಿರಾಮವನ್ನು ಮಾಡಿ ಜಮ್ಮು ಕಶ್ಮೀರದ ವಿವಿಧೆಡೆ ದಾಳಿ ಮಾಡುತ್ತಿದೆ. ಉಧಮ್‌ಪುರ, ಅಖ್ನೂರ್, ನೌಶೇರಾ, ಪೂಂಚ್, ರಾಜೌರಿ, ಮೆಂಧರ್, ಜಮ್ಮು, ಸುಂದರ್‌ಬನಿ, ಆರ್‌ಎಸ್ ಪುರ, ಅರ್ನಿಯಾ ಹಾಗೂ ಕಥುವಾದಲ್ಲಿ ಡ್ರೋನ್ ಮೂಲಕ ಸ್ಪೋಟಕಗಳನ್ನು ಭಾರತದ ಮೇಲೆ ಹಾಕುತ್ತಿದೆ. ಈ ಬಗ್ಗೆ ಸ್ವತಃ ಕಿಡಿ ಕಾರಿರುವ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, ‘ಕದನ ವಿರಾಮಕ್ಕೆ ಈಗಷ್ಟೇ ಏನಾಯಿತು? ಶ್ರೀನಗರದಾದ್ಯಂತ ಸ್ಫೋಟಗಳ ಸದ್ದು ಕೇಳಿಬಂದಿದೆ’ ಎಂದು ಹೇಳಿದ್ದಾರೆ.