ಕಾಲು ಕೆದರಿ ಯುದ್ಧಕ್ಕೆ ಬರ್ತಿದೆ ಪಾಪಿ ಪಾಕಿಸ್ತಾನ.. ಡ್ರ್ಯಾಗನ್ ದೇಶ ನೀಡಿದ್ದ ಕ್ಷಿಪಣಿ ಛಿದ್ರಛಿದ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಯೂರಿದ್ದ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ‘ಆಪರೇಷನ್ ಸಿಂದೂರ’ ಮೂಲಕ ತಕ್ಕ ಶಾಸ್ತಿ ಮಾಡಿದೆ. ಇದರ ಬೆನ್ನಲ್ಲೇ ಎರಡು ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣ ಆಗಿದೆ.

ಭಾರತದ ಮೇಲೆ ಪಾಕಿಸ್ತಾನ ಕ್ಷಿಪಣಿ ದಾಳಿಗೆ ಪ್ರಯತ್ನ ಮಾಡಿರೋದು ಇದೀಗ ಬೆಳಕಿಗೆ ಬಂದಿದೆ. ಇದು ಭಾರತದ ಏರ್​ ಡಿಫೆನ್ಸ್ ಸಿಸ್ಟಮ್​​ಗೆ ಗೊತ್ತಾಗಿದ್ದು, ಪಂಜಾಬ್​ನ ಅಮೃತಸರ-ಬಾಟಲಾ ಬಳಿಯ ಜೆಥುವಾಲ್ ಗ್ರಾಮದ ಬಳಿ ಪಾಕ್​​ ಮಿಸೈಲ್​ ಅನ್ನು ಹೊಡೆದು ಹಾಕಲಾಗಿದೆ.

ಪಾಕಿಸ್ತಾನದ ಕ್ಷಿಪಣಿಯು ಛಿದ್ರಛಿದ್ರವಾಗಿ ಬಿದ್ದಿದೆ. ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮಧ್ಯರಾತ್ರಿ ಸುಮಾರು 1.30ರ ಸುಮಾರಿಗೆ ಕ್ಷಿಪಣಿ ದಾಳಿ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ಉಡಾಯಿಸಿದ್ದು ಕೇವಲ ಒಂದು ಕ್ಷಿಪಣಿ ಅಲ್ಲ ಎರಡು ಕ್ಷಿಪಣಿಗಳನ್ನ ಹಾರಿಸಿದೆ. ಪಾಕಿಸ್ತಾನ ಹಾರಿಸಿದ್ದ ಕ್ಷಿಪಣಿಗಳು ಪಾಕಿಸ್ತಾನದಲ್ಲ. ಪಾಕಿಸ್ತಾನಕ್ಕೆ ಚೀನಾ ನೀಡಿರುವ ಮಿಸೈಲ್ ಆಗಿದೆ ಎಂದು ತಿಳಿದುಬಂದಿದೆ. ಆದರೆ, ಈ ದಾಳಿಗೆ ಭಾರತ ಏರ್​ ಡಿಫೆನ್ಸ್ ಸಿಸ್ಟಮ್​​ ದಿಟ್ಟ ಉತ್ತರ ನೀಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!